ಬೆಂಗಳೂರು :ಬಿಗ್‌ಬಾಸ್ ಕನ್ನಡಕ್ಕೆ ಅದ್ಧೂರಿ ಚಾಲನೆ: ಅಖಾಡಕ್ಕಿಳಿದ 16 ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್!

ಬೆಂಗಳೂರು: ಬಹುನಿರೀಕ್ಷಿತ ‘ಬಿಗ್‌ಬಾಸ್ ಕನ್ನಡ ಸೀಸನ್ 13’ಕ್ಕೆ ಭರ್ಜರಿ ಹಾಗೂ ಅದ್ಧೂರಿ ಚಾಲನೆ ಸಿಕ್ಕಿದೆ. ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಮಾತುಕತೆ ನಡೆಸಿದ ಬಳಿಕ 16 ಸ್ಪರ್ಧಿಗಳು ಒಬ್ಬೊಬ್ಬರಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದಾರೆ. ಸಿನಿಮಾ, ಕಿರುತೆರೆ, ರಂಗಭೂಮಿ ಹಾಗೂ ಸಾಮಾಜಿಕ ಜಾಲತಾಣದ ವಿವಿಧ ಹಿನ್ನೆಲೆಯ ತಾರೆಯರು ಈ ಬಾರಿ ಶೋಗೆ ರಂಗು ತಂದಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 13ರ 16 ಸ್ಪರ್ಧಿಗಳ ಪಟ್ಟಿ:
ಜಗ್ಗ ಮಮ್ಮಿ ಅಲಿಯಾಸ್ ಜಗದೀಶ್: ಮಾತಿನ ಶೈಲಿಯಿಂದ ಗಮನ ಸೆಳೆದಿರುವ ವ್ಯಕ್ತಿತ್ವ.
ಸೌಂದರ್ಯ ಶೆಟ್ಟಿ: ಮಂಗಳೂರು ಮೂಲದ ಮಾಡೆಲ್ ಹಾಗೂ ನಟಿ.
ಅವಿನಾಶ್ ಶತಮರ್ಷನ: ನಟ, ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ.
ಪ್ರಥಮಾ ಪ್ರಸಾದ್: ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಹಾಗೂ ಕಿರುತೆರೆ ನಟಿ.
ಗಗನ್ ಚಿನ್ನಪ್ಪ: ‘ಮಂಗಳಗೌರಿ ಮದುವೆ’ ಖ್ಯಾತಿಯ ಪ್ರಸಿದ್ಧ ಕಿರುತೆರೆ ನಟ.
ಸಂಗೀತಾ ಭಟ್: ಕನ್ನಡ ಚಿತ್ರರಂಗದ ಜನಪ್ರಿಯ ನಟಿ.
ಕಾವ್ಯ ಗೌಡ: ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಖ್ಯಾತಿಯ ನಟಿ.
ಓಂ ಪ್ರಕಾಶ್: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ.
ಕಿರಣ್ ಶಾಸ್ತ್ರಿ: ಜವಾರಿ ಭಾಷೆಯಿಂದ ಗಮನ ಸೆಳೆದು ‘ಅಗ್ನಿಪರೀಕ್ಷೆ’ ಗೆದ್ದು ಬಂದ ಸ್ಪರ್ಧಿ.
ಆಸಿಯಾ ಫಿರ್ದೋಸ್: ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯ ಕ್ಯೂಟ್ ನಟಿ.
ಲಿಖಿತ್ ಗೋಂದಿ: ‘ಅಗ್ನಿಪರೀಕ್ಷೆ’ ಮೂಲಕ ಎಂಟ್ರಿ ಪಡೆದ ಯುವ ಸ್ಪರ್ಧಿ.
ತಾಂಡವ್ ರಾಮ್: ಕುಸ್ತಿಪಟು ಹಾಗೂ ‘ಜೋಡಿ ಹಕ್ಕಿ’ ಧಾರಾವಾಹಿ ನಟ.
ವೈಷ್ಣವಿ ಕೌಂಡಿನ್ಯ: ‘ಮಿಥುನ ರಾಶಿ’ ಧಾರಾವಾಹಿ ಖ್ಯಾತಿಯ ನಟಿ.
ಧನುಷ್ ಮಂಜುನಾಥ್: ‘ಅಗ್ನಿಪರೀಕ್ಷೆ’ ಮೂಲದ ಸ್ಪರ್ಧಿ.
ಯಶಸ್ ಕೃಷ್ಣ: ‘ಪವಿತ್ರ ಬಂಧನ’ ಧಾರಾವಾಹಿ ಖ್ಯಾತಿಯ ನಟ.
ಕವಿ ಮಂಜುನಾಥ್: ‘ಅಗ್ನಿಪರೀಕ್ಷೆ’ಯ ಜ್ಯೂರಿ ಆಯ್ಕೆಯ ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿ.
ಮುಂದಿನ ಆಟದ ಕುತೂಹಲ:
ವೈವಿಧ್ಯಮಯ ಹಿನ್ನೆಲೆಯಿಂದ ಬಂದಿರುವ ಈ 16 ಸ್ಪರ್ಧಿಗಳ ನಡುವೆ ಮುಂಬರುವ ದಿನಗಳಲ್ಲಿ ಟಾಸ್ಕ್, ನಾಮಿನೇಷನ್, ಸ್ನೇಹ ಹಾಗೂ ಮನಸ್ತಾಪಗಳು ಶುರುವಾಗಲಿದ್ದು, ದೊಡ್ಮನೆಯ ಅಸಲಿ ಆಟದ ರೋಚಕತೆ ಹೆಚ್ಚಾಗಲಿದೆ.