ಉತ್ತರ ಪ್ರದೇಶ : ಡಿಎಂ ಅಂಕಲ್ ಪ್ಲೀಸ್ ಸಹಾಯ ಮಾಡಿ; ಒಂದೇ ಕಾಲಿನಲ್ಲಿ 400 ಮೀಟರ್ ಜಿಗಿಯುತ್ತಾ ಶಾಲೆಗೆ ಹೋಗುವ ಬಾಲಕಿಯ ಕಣ್ಣೀರಿನ ಕಥೆ! school girl emotional story

ಉತ್ತರ ಪ್ರದೇಶ : ಡಿಎಂ ಅಂಕಲ್ ಪ್ಲೀಸ್ ಸಹಾಯ ಮಾಡಿ; ಒಂದೇ ಕಾಲಿನಲ್ಲಿ 400 ಮೀಟರ್ ಜಿಗಿಯುತ್ತಾ ಶಾಲೆಗೆ ಹೋಗುವ ಬಾಲಕಿಯ ಕಣ್ಣೀರಿನ ಕಥೆ! school girl emotional story

ಉತ್ತರ ಪ್ರದೇಶ :ಓದಬೇಕು ಎಂಬ ಹಂಬಲವಿದ್ದರೆ ಎಂತಹ ಕಷ್ಟವನ್ನಾದರೂ ಎದುರಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ 7 ವರ್ಷದ ಬಾಲಕಿ ರಾಗಿಣಿ ಸಾಕ್ಷಿಯಾಗಿದ್ದಾಳೆ. 6 ತಿಂಗಳ ಮಗುವಾಗಿದ್ದಾಗ ಸಂಭವಿಸಿದ ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡಿದ್ದರೂ, ಈ ಪುಟ್ಟ ಬಾಲಕಿ ಶಿಕ್ಷಣದ ಮೇಲಿನ ಆಸೆಯನ್ನು ಕೈಬಿಡದೆ ಪ್ರತಿದಿನ 400 ಮೀಟರ್ ದೂರವನ್ನು ಒಂದೇ ಕಾಲಿನಲ್ಲಿ ಜಿಗಿಯುತ್ತಾ ಶಾಲೆಗೆ ತೆರಳುತ್ತಿದ್ದಾಳೆ.

 

​’ನನಗೂ ಓದಬೇಕು’ ಎಂದು ಹಠ: ಬಲ್ಲಯಾ ಜಿಲ್ಲೆಯ ರಾಗಿಣಿಯ ಕಾಲಿನ ಚಿಕಿತ್ಸೆಗೆ ಬಡ ಕುಟುಂಬ ಬಳಿ ಹಣವಿರಲಿಲ್ಲ. ನೆರೆಹೊರೆಯ ಮಕ್ಕಳು ಶಾಲೆಗೆ ಹೋಗುವುದನ್ನು ನೋಡಿ ಅಳುತ್ತಿದ್ದ ಬಾಲಕಿಯ ಓದುವ ಹಠ ಕಂಡು ತಾಯಿ ಶಾಲೆಗೆ ಸೇರಿಸಿದ್ದರು. ದಾರಿಯಲ್ಲಿ ಆಯಾಸವಾದರೂ ವಿಶ್ರಾಂತಿ ಪಡೆಯುತ್ತಾ ಪ್ರತಿದಿನ ಆಕೆ ಶಾಲೆ ತಲುಪುತ್ತಿದ್ದಳು.

​ಡಿಎಂಗೆ ಭಾವನಾತ್ಮಕ ಮನವಿ: ದಿನಗೂಲಿ ಕಾರ್ಮಿಕನ ಮಗಳಾದ ರಾಗಿಣಿಗೆ ಕೃತಕ ಕಾಲು ಅಥವಾ ಟ್ರೈಸಿಕಲ್ ಕೊಳ್ಳಲು ಶಕ್ತಿಯಿರಲಿಲ್ಲ. ಹೀಗಾಗಿ “ಡಿಎಂ ಅಂಕಲ್, ನನಗೆ ಒಂದು ಟ್ರೈಸಿಕಲ್ ಕೊಡಿಸಿ. ಅದರಲ್ಲಿ ನಾನು ಶಾಲೆಗೆ ಹೋಗುತ್ತೇನೆ” ಎಂದು ಆಕೆ ಮಾಡಿದ ವೀಡಿಯೊ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಗಮನ ಸೆಳೆಯಿತು.

​ಹರಿಯಬಂದ ಸಹಾಯದ ಹಸ್ತ: ರಾಗಿಣಿಯ ಕಷ್ಟಕ್ಕೆ ಸ್ಪಂದಿಸಿದ ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕುಟುಂಬಕ್ಕೆ ₹26,500 ಆರ್ಥಿಕ ನೆರವು ನೀಡಿದ್ದಲ್ಲದೆ, ಸ್ಥಳೀಯ ತಂಡದ ಮೂಲಕ ಬಾಲಕಿಗೆ ಟ್ರೈಸಿಕಲ್ ಹಸ್ತಾಂತರಿಸಿದ್ದಾರೆ. ಜೊತೆಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡಿ ಮುಂದಿನ ಸಹಾಯದ ಭರವಸೆಯನ್ನೂ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article