ಕೇರಳ :ಪ್ರಕೃತಿ ವಿಕೋಪ: ಭೂಕುಸಿತ, ಹಠಾತ್ ಪ್ರವಾಹಕ್ಕೆ ಐವರು ಬಲಿ!

ಕೇರಳ :ಪ್ರಕೃತಿ ವಿಕೋಪ: ಭೂಕುಸಿತ, ಹಠಾತ್ ಪ್ರವಾಹಕ್ಕೆ ಐವರು ಬಲಿ!

ಕೇರಳ :ಭಾರಿ ಮಳೆಯಿಂದಾಗಿ ಭೂಕುಸಿತ ಹಾಗೂ ಹಠಾತ್ ಪ್ರವಾಹ ಉಂಟಾಗಿ ಭೀಕರ ದುರಂತ ಸಂಭವಿಸಿದ್ದು, ಐವರು ಮೃತಪಟ್ಟು ಇಬ್ಬರು ನಾಪತ್ತೆಯಾಗಿದ್ದಾರೆ. ಮಲಪ್ಪುರಂ ಜಿಲ್ಲೆಯ ಕೊಟ್ಟಪ್ಪುಳ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಐವರು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಇಬ್ಬರು ಮೃತಪಟ್ಟು ಮತ್ತಿಬ್ಬರು ನಾಪತ್ತೆಯಾಗಿದ್ದಾರೆ. ಕೊಟ್ಟಾಯಂನಲ್ಲಿ ತಮಿಳುನಾಡು ಮೂಲದ ಪ್ರವಾಸಿ ಸಂಗೀತಾ ಅರುಲ್ ಲಾಲ್ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟರೆ, ಇಡುಕ್ಕಿಯ ಕೊಟ್ಟಕಂಬೂರಿನಲ್ಲಿ ಮಣ್ಣು ಕುಸಿದು ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಗಂಟೆಗೊಮ್ಮೆ ಪರಾಮರ್ಶೆ ನಡೆಸುವಂತೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಆದೇಶಿಸಿದ್ದಾರೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ವಿಘ್ನೇಶ್ವರಿ ಐಎಎಸ್ ಅವರು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ. ಹವಾಮಾನ ಇಲಾಖೆಯು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದ್ದು, ಶೋಧ ಹಾಗೂ ರಕ್ಷಣಾ ಕಾರ್ಯಗಳು ತೀವ್ರವಾಗಿ ಸಾಗಿವೆ.

 

Ads on article

Advertise in articles 1

advertising articles 2

Advertise under the article