ಮೈಸೂರು :ಇಂದಿನಿಂದ ಆನ್​ಲೈನ್​ನಲ್ಲಿ ದಸರಾ ಗೋಲ್ಡ್ ಕಾರ್ಡ್ ಮತ್ತು ಜಂಬೂ ಸವಾರಿ ಟಿಕೆಟ್ ಮಾರಾಟ..

ಮೈಸೂರು :ಇಂದಿನಿಂದ ಆನ್​ಲೈನ್​ನಲ್ಲಿ ದಸರಾ ಗೋಲ್ಡ್ ಕಾರ್ಡ್ ಮತ್ತು ಜಂಬೂ ಸವಾರಿ ಟಿಕೆಟ್ ಮಾರಾಟ..

mysuru Dasara
ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಮೈಸೂರು ಜಿಲ್ಲಾಡಳಿತ ಇಂದಿನಿಂದ ಆನ್​ಲೈನ್ ಮುಖಾಂತರ ಜಂಬೂ ಸವಾರಿ, ಪಂಜಿನ ಕವಾಯತು, ಡ್ರೋನ್ ಷೋ ವೀಕ್ಷಣೆಗೆ ಟಿಕೆಟ್ ಬುಕಿಂಗ್ ಮತ್ತು ಗೋಲ್ಡ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಿದೆ.

ಪ್ರತಿ ವರ್ಷದಂತೆಯೇ ಈ ಬಾರಿಯೂ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ದಸರಾ ಸಾಂಸ್ಕೃತಿಕ ಚಟುವಟಿಕೆಗಳು ಗರಿಗೆದರಿವೆ. ದಸರಾ ಮುಖ್ಯ ಆಕರ್ಷಣೆಯಾದ ಜಂಬೂ ಸವಾರಿಯನ್ನು ಅರಮನೆ ಆವರಣದಲ್ಲಿ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದ್ದು, ಅದಕ್ಕೆ ಟಿಕೆಟ್ ನಿಗದಿಪಡಿಸಲಾಗಿದೆ.

ದಸರಾ ಮಹೋತ್ಸವದ ಅಧಿಕೃತ ವೆಬ್​ಸೈಟ್​ mysoredasara.gov.in ನಲ್ಲಿ ಸಾರ್ವಜನಿಕರು ಟಿಕೆಟ್ ಪಡೆಯಬಹುದಾಗಿದೆ. ಜಂಬೂ ಸವಾರಿ ಟಿಕೆಟ್ ಹೊರತುಪಡಿಸಿ ಪಂಜಿನ ಕವಾಯತು, ಡ್ರೋನ್ ಶೋ ಅಲ್ಲದೇ ಗೋಲ್ಡ್ ಕಾರ್ಡ್ ಸಹ ಲಭ್ಯವಿದ್ದು, ಇಂದಿನಿಂದ ದಸರಾ ಅಧಿಕೃತ ವೆಬ್​ಸೈಟ್ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಮೈಸೂರು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ಟಿಕೆಟ್​ಗಳ ದರ ಹಾಗೂ ಸೌಲಭ್ಯದ ವಿವರಗಳು ಈ ಕೆಳಕಂಡಂತಿವೆ

  • ಟಿಕೆಟ್​ಗಳನ್ನು ಮೈಸೂರು ದಸರಾ-2026 ರ ಅಧಿಕೃತ ಜಾಲತಾಣ mysoredasara.gov.in ಮೂಲಕ ಬುಕಿಂಗ್ ಮಾಡಬಹುದು.
  • ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್​ಗಳ ದರಗಳು ಕಳೆದ ವರ್ಷದಂತಯೇ ಇರುತ್ತದೆ.
  • ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಜಂಬೂ ಸವಾರಿ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಮೈಸೂರು ಅರಮನೆ ಹಾಗೂ ಒಂದು ದಿನದ ಡ್ರೋನ್ ಷೋ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿರುತ್ತದೆ. ಒಂದು ಗೋಲ್ಡ್ ಕಾರ್ಡ್ ಅಥವಾ ಒಂದು ಟಿಕೆಟ್​ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ.

Ads on article

Advertise in articles 1

advertising articles 2

Advertise under the article