ಚೀನಾ : ಯೂಟ್ಯೂಬ್ ಸಾಮ್ರಾಜ್ಯಕ್ಕೆ ಕಂಟಕ?: ಬಿಗ್ ಆಫರ್ ನೀಡಿ ಮಾರುಕಟ್ಟೆಗೆ ಧುಮುಕುತ್ತಿದೆ ಹೊಸ ಅಪ್ಲಿಕೇಶನ್!

ಚೀನಾ : ಯೂಟ್ಯೂಬ್ ಸಾಮ್ರಾಜ್ಯಕ್ಕೆ ಕಂಟಕ?: ಬಿಗ್ ಆಫರ್ ನೀಡಿ ಮಾರುಕಟ್ಟೆಗೆ ಧುಮುಕುತ್ತಿದೆ ಹೊಸ ಅಪ್ಲಿಕೇಶನ್!

ಚೀನಾ :ಜಗತ್ತಿನಾದ್ಯಂತ ಆಳವಾಗಿ ಬೇರೂರಿರುವ ಯೂಟ್ಯೂಬ್‌ನ ಏಕಸ್ವಾಮ್ಯಕ್ಕೆ ಪ್ರಬಲ ಸ್ಪರ್ಧಿಯೊಬ್ಬರು ಎಂಟ್ರಿ ಕೊಡುತ್ತಿದ್ದಾರೆ. ಚೀನಾದಲ್ಲಿ ಯೂಟ್ಯೂಬ್‌ಗೆ ಪರ್ಯಾಯವಾಗಿ ಯಶಸ್ಸು ಕಂಡಿರುವ ‘ಬಿಲಿಬಿಲಿ’ (Bilibili) ವಿಡಿಯೋ ಸ್ಟ್ರೀಮಿಂಗ್ ಆ್ಯಪ್ ಹಾಗೂ ವೆಬ್‌ಸೈಟ್ ಈಗ ಜಾಗತಿಕವಾಗಿ ಲಾಂಚ್ ಆಗಲು ಸಂಪೂರ್ಣವಾಗಿ ಸಜ್ಜಾಗಿದೆ.

ಜೆನ್ ಝೀ ಹಾಗೂ ಕಂಟೆಂಟ್ ಕ್ರಿಯೇಟರ್ಸ್ ಮೇಲೆ ಕಣ್ಣು:

ಮುಖ್ಯವಾಗಿ ‘ಜೆನ್ ಝೀ’ (Gen Z) ಯುವಸಮೂಹವನ್ನು ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾದ ಈ ಆ್ಯಪ್, ಇಂಗ್ಲಿಷ್ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಅಪ್‌ಡೇಟ್ ಆಗುತ್ತಿದೆ. ಆ್ಯಪ್ ಬೆಳೆಸಲು ಹಾಗೂ ಜಾಗತಿಕ ಮಟ್ಟದ ಇನ್‌ಫ್ಲುಯೆನ್ಸರ್‌ಗಳನ್ನು ಮತ್ತು ಕಂಟೆಂಟ್ ಕ್ರಿಯೇಟರ್ಸ್‌ಗಳನ್ನು ತನ್ನತ್ತ ಸೆಳೆಯಲು ಬಿಲಿಬಿಲಿ ಭಾರಿ ಸಂಭಾವನೆಯ ಆಫರ್‌ಗಳನ್ನು ನೀಡುತ್ತಿದೆ. ಲಾಸ್ ಏಂಜಲೀಸ್, ಲಂಡನ್, ಟೋಕಿಯೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಿಬ್ಬಂದಿಗಳ ನೇಮಕಾತಿಯನ್ನೂ ಆರಂಭಿಸಿದೆ.

ಯೂಟ್ಯೂಬ್‌ಗೂ ಬಿಲಿಬಿಲಿಗೂ ಏನು ವ್ಯತ್ಯಾಸ?

ಯೂಟ್ಯೂಬ್‌ನಂತೆಯೇ ಬಿಲಿಬಿಲಿ ಕೂಡ ಯೂಸರ್ ಜನರೇಟೆಡ್ ಕಂಟೆಂಟ್ (UGC) ವೇದಿಕೆಯಾಗಿದೆ. ಇದರಲ್ಲಿ ಅನಿಮೇಷನ್, ಎಂಟರ್‌ಟೈನ್‌ಮೆಂಟ್, ಗೇಮಿಂಗ್ ಹಾಗೂ ಲೈಫ್‌ಸ್ಟೈಲ್ ವೀಡಿಯೊಗಳು ಲಭ್ಯವಿರಲಿವೆ. ಕಂಟೆಂಟ್ ಕ್ರಿಯೇಟರ್ಸ್‌ಗಳಿಗೆ ಯೂಟ್ಯೂಬ್‌ನಂತೆ ಇಲ್ಲೂ ವೀವ್ಸ್ ಹಾಗೂ ಪ್ರಮೋಷನ್‌ಗಳ ಮೂಲಕ ಆದಾಯ ಗಳಿಸಲು ಉತ್ತಮ ಅವಕಾಶವಿದೆ.

ಭಾರತಕ್ಕೆ ಬಿಲಿಬಿಲಿ ಬರುವುದು ಅನುಮಾನ?

ಚೀನಾ ಮೂಲದ ಟಿಕ್‌ಟಾಕ್ ಸೇರಿದಂತೆ ಹಲವು ಆ್ಯಪ್‌ಗಳನ್ನು ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ಭಾರತ ಸರ್ಕಾರ ಈಗಾಗಲೇ ನಿಷೇಧಿಸಿದೆ. ಕೋಟ್ಯಂತರ ಬಳಕೆದಾರರಿರುವ ಭಾರತದ ಮಾರುಕಟ್ಟೆ ಬಿಲಿಬಿಲಿಗೆ ಪ್ರಮುಖ ಗುರಿಯಾಗಿದ್ದರೂ, ಕೇಂದ್ರ ಸರ್ಕಾರ ಚೀನಾ ಮೂಲದ ಈ ಆ್ಯಪ್‌ಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

 

Ads on article

Advertise in articles 1

advertising articles 2

Advertise under the article