ದಕ್ಷಿಣ ಕನ್ನಡ /ಉಡುಪಿ :ಜಿಲ್ಲೆಯಾದ್ಯಂತ ಅ. 11ರಿಂದ ನವರಾತ್ರಿ ಸಂಭ್ರಮ ಆರಂಭ..!  ಭಕ್ತಿ, ಸಡಗರಕ್ಕೆ ಸಾಕ್ಷಿಯಾಗಲಿರುವ ವಿವಿಧ ದೇವಸ್ಥಾನಗಳು.. ಹಬ್ಬದ ಹಿನ್ನೆಲೆಯಲ್ಲಿ ವಿದ್ಯುತ್ ದೀಪ, ಹೂವು, ತಳಿರು ತೋರಣಗಳಿಂದ ಅಲಂಕಾರ ಗೊಂಡು ಶೋಭಿಸುತ್ತಿರುವ ದೇವಾಲಯಗಳು..!

ದಕ್ಷಿಣ ಕನ್ನಡ /ಉಡುಪಿ :ಜಿಲ್ಲೆಯಾದ್ಯಂತ ಅ. 11ರಿಂದ ನವರಾತ್ರಿ ಸಂಭ್ರಮ ಆರಂಭ..! ಭಕ್ತಿ, ಸಡಗರಕ್ಕೆ ಸಾಕ್ಷಿಯಾಗಲಿರುವ ವಿವಿಧ ದೇವಸ್ಥಾನಗಳು.. ಹಬ್ಬದ ಹಿನ್ನೆಲೆಯಲ್ಲಿ ವಿದ್ಯುತ್ ದೀಪ, ಹೂವು, ತಳಿರು ತೋರಣಗಳಿಂದ ಅಲಂಕಾರ ಗೊಂಡು ಶೋಭಿಸುತ್ತಿರುವ ದೇವಾಲಯಗಳು..!

ಮಂಗಳೂರು/ಉಡುಪಿ :ಜಿಲ್ಲೆಯಾದ್ಯಂತ ಅ. 11ರಿಂದ ನವರಾತ್ರಿ ಸಂಭ್ರಮ ಆರಂಭಗೊಳ್ಳಲಿದ್ದು, ವಿವಿಧ ದೇವಾಲಯಗಳು ಭಕ್ತಿ, ಸಡಗರಕ್ಕೆ ಸಾಕ್ಷಿಯಾಗಲಿದೆ. ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಗಳನ್ನು ವಿದ್ಯುತ್ ದೀಪ, ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.

ದ.ಕ. ಜಿಲ್ಲೆಯ ಪುರಾಣ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಹಿತ ವಿವಿಧ ದೇವಿ ಆಲಯಗಳಲ್ಲಿ ನವರಾತ್ರಿಯ ವಿಶೇಷ ಪೂಜೆ ನೆರವೇರಲಿದೆ.

'ಮಂಗಳೂರು ದಸರಾ' ಎಂದು ಪ್ರಸಿದ್ದಿ ಪಡೆದಿ ರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಶ್ರೀಕ್ಷೇತ್ರ ಸಹಿತ ಸುತ್ತಮುತ್ತಲಿನ ಪ್ರದೇಶವನ್ನು ವಿದ್ಯುದ್ದೀಪಗಳಿಂದ ಅಲಂಕಾರಗೊಳಿಸಲಾಗಿದೆ. ಅ. 11ರಂದು ಬೆಳಗ್ಗೆ ಶಾರದೆ, ಗಣಪತಿ ಸಹಿತ ನವದುರ್ಗೆಯವರ ಮೂರ್ತಿ ಪ್ರತಿಷ್ಠಾಪನೆ ನಡೆದು, ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅ. 22ರ ವರೆಗೆ ಪ್ರತೀ ದಿನ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆ ಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ನಡೆಯಲಿರುವ ದರ್ಬಾರ್ ಮಂಟಪವನ್ನು ಈ ಬಾರಿ ಅರಮನೆ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ದೇಶದ ವಿವಿಧ ಕಡೆಗಳಲ್ಲಿ ಭಕ್ತರು ಅಗಮಿಸುವ ನಿರೀಕ್ಷೆ ಇದೆ.

ಅ. 21ರಂದು ಅಪರಾಹ್ನ 4 ಗಂಟೆಗೆ ಮಂಗಳೂರು ದಸರಾ ಭವ್ಯ ಶೋಭಾಯಾತ್ರೆ ಮೆರವಣಿಗೆ ಅರಂಭಗೊಳ್ಳಲಿದೆ. ನವರಾತ್ರಿ ಹಿನ್ನೆಲೆಯಲ್ಲಿ ಮಂಗಳೂರು ನಗರದ ಸುಮಾರು 25 ಕಿ. ಮೀ. ವ್ಯಾಪ್ತಿ ವಿವಿಧ ರೀತಿಯ ಬಲ್ಬಳಿಂದ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ.

ಉಡುಪಿ: ಶ್ರೀದೇವಿಯ ಆರಾಧನೆಗೆ ಸಿದ್ಧತೆ

ನವರಾತ್ರಿ ಉತ್ಸವಕ್ಕೆ ಉಡುಪಿ ಜಿಲ್ಲೆಯ ದೇವಸ್ಥಾನ ಗಳಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ನಗರದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇವಸ್ಥಾನ, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನ, ದೊಡ್ಡಣಗುಡ್ಡೆಯ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಇಂದ್ರಾಳಿಯ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ, ಬೈಲೂರು ಮಹಿಷಮರ್ದಿನಿ ದೇವಸ್ಥಾನ, ಲಕ್ಷ್ಮೀಂದ್ರದ ಕಾಮಾಕ್ಷಿ ದೇವಿ ದೇಗುಲ, ಪುತ್ತೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಹಿತ ವಿವಿಧ ದೇಗುಲಗಳಲ್ಲಿ ನವರಾತ್ರಿ ಉತ್ಸವ ನಡೆಯಲಿದೆ.

ಅ. 21ರ ವರೆಗೆ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪುಷ್ಪಾಲಂಕಾರ, ತ್ರಿಕಾಲ ಪೂಜೆ, ಚಂಡಿಕಾ ಪಾರಾಯಣ, ಚಂಡಿಕಾ, ದುರ್ಗಾ ಹವನಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೀಪನಮಸ್ಕಾರ, ರಂಗಪೂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ವಿಶೇಷ ರಂಗಪೂಜೆಗಳು ನಡೆಯಲಿವೆ.

ಶ್ರೀಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ

ದಲ್ಲಿ 5ನೇ ವರ್ಷದ ಉಡುಪಿ ಉಚ್ಚಿಲ ದಸರಾ -2026 ಉತ್ಸವ ನಾಡೋಜ ಡಾ| ಜಿ. ಶಂಕರ್ ನೇತೃತ್ವ ದಲ್ಲಿ ನಡೆಯಲಿದೆ. ದರ್ಬಾರ್ ಮಂಟಪದಲ್ಲಿ ನವದುರ್ಗೆಯರು, ಶ್ರೀ ಶಾರದಾಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುವುದು. ಪ್ರತೀದಿನ ಬೆಳಗ್ಗೆ ಚಂಡಿಕಾಯಾಗ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನ ಕಾರ್ಯಕ್ರಮ, ಸಂಜೆ ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಪ್ರವಚನ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಅ. 11ರಂದು ಬೆಳಗ್ಗೆ 9.30ಕ್ಕೆ ನವದುರ್ಗೆಯರು ಮತ್ತು ಶ್ರೀ ಶಾರದಾಮಾತೆಯ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದ್ದು, 10.30ಕ್ಕೆ ಸಚಿವ ಬಸವಂತಪ್ಪ ಅವರು ಉಡುಪಿ ಉಚ್ಚಿಲ ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಅ. 21ರಂದು ಬೃಹತ್ ಶೋಭಾಯಾತ್ರೆಯೊಂದಿಗೆ ಜಲಸ್ತಂಭನ ನೆರವೇರಲಿದೆ.

Ads on article

Advertise in articles 1

advertising articles 2

Advertise under the article