ಹಾವೇರಿ: ಬಡ್ಡಿ ಹಣ ಕೊಡಲು ವಿಳಂಬ, ವ್ಯಕ್ತಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಆರೋಪಿಗಳ ವಿರುದ್ಧ FIR

ಹಾವೇರಿ: ಬಡ್ಡಿ ಹಣ ಕೊಡಲು ವಿಳಂಬ, ವ್ಯಕ್ತಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಆರೋಪಿಗಳ ವಿರುದ್ಧ FIR

Man kidnapped over unpaid interest of loan In Haveri
ಹಾವೇರಿ : ವಾರದ ಬಡ್ಡಿ ಕಟ್ಟದಿದ್ದಕ್ಕೆ ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಶಿಗ್ಗಾಂವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮಣಿಕಂಠ ಎಂಬಾತ ಅಪಹರಣಕ್ಕೆ ಒಳಗಾಗಿ ಚಿತ್ರಹಿಂಸೆ ಅನುಭವಿಸಿದ ಸಾಲಗಾರ.
ಮಣಿಕಂಠ ನೀಡಿದ ದೂರು ಹಿನ್ನೆಲೆಯಲ್ಲಿ ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ, ಸುನೀಲ್ ಕತ್ತಿ ಎಂಬ ಆರೋಪಿಗಳ ವಿರುದ್ಧ ಬಂಕಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಲಾದ ಮಾಹಿತಿ: ಆರೋಪಿಗಳಿಂದ ನಾನು ವಾರದ ಬಡ್ಡಿಯಂತೆ ಹಣ ಪಡೆದುಕೊಂಡಿದ್ದೆ. ಅಸಲು ಮತ್ತು ಬಡ್ಡಿ ಕೊಡಲು ಸ್ವಲ್ಪ ವಿಳಂಬ ಆಗಿದ್ದಕ್ಕೆ ತನ್ನನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಮಣಿಕಂಠ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ತನ್ನನ್ನು ಅಕ್ಟೋಬರ್​ 16ರಂದು ಜನನಿಬಿಡ ಪ್ರದೇಶಕ್ಕೆ ಕರೆದೊಯ್ದ ಆರೋಪಿಗಳು, ಚಿತ್ರಹಿಂಸೆ ನೀಡಿದ್ದಾರೆ. ಕೈ-ಕಾಲು ಕಟ್ಟಿ ಹಾಕಿ ನಾಲ್ಕು ದಿನಗಳ ಕಾಲ ಕೂಡಿ ಹಾಕಿ‌ ಹೇಯ ಕೃತ್ಯ ನಡೆಸಿದ್ದಾರೆ. ಮರದ ಕಟ್ಟಿಗೆ, ಪೈಪ್‌ನಿಂದ ಹೊಡೆದು ಸಿಗರೇಟ್‌ನಿಂದ ದೇಹದ ಮೇಲೆ ಸುಟ್ಟು ಚಿತ್ರಹಿಂಸೆ ನೀಡಿದ್ದಾರೆ‌. ನೀರು ಕೇಳಿದಾಗ ತನ್ನ ಮೇಲೆ ಮೂತ್ರ ಸುರಿಸಿ ವಿಕೃತವಾಗಿ ನಡೆದುಕೊಂಡಿದ್ದಾರೆ. ಅವಾಚ್ಯವಾಗಿ ನಿಂದಿಸಿದ್ದಾರೆ. ನಾಲ್ಕು ದಿನಗಳ ಚಿತ್ರಹಿಂಸೆಯ ಬಳಿಕ ಅ.20ರಂದು ಅಪರಿಚಿತ ವ್ಯಕ್ತಿಯ ನೆರವಿನಿಂದ ಹೇಗೋ ತಪ್ಪಿಸಿಕೊಂಡು ಬಂದೆ. ಸ್ಥಳೀಯರ ಸಹಾಯದಿಂದ ಕುಟುಂಬಸ್ಥರಿಗೆ ವಿಷಯ ತಿಳಿಸಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವೆ ಎಂದು ಮಣಿಕಂಠ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಕ್ತಸಿಕ್ತ ಸ್ಥಿತಿಯಲ್ಲಿದ್ದ ಮಣಿಕಂಠನಿಗೆ ಮೊದಲು ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ಗೆ ದಾಖಲಿಸಲಾಗಿದೆ‌. ಹಲ್ಲೆಗೊಳಗಾದ ಮಣಿಕಂಠ ನೀಡಿದ ದೂರಿನ ಮೇರೆಗೆ ಮಂಜುನಾಥ ಕತ್ತಿ, ನವೀನ್ ಹಾನಗಲ್, ಗಣೇಶ ಸ್ವಾಧಿ, ಸುನೀಲ್ ಕತ್ತಿ ಎಂಬುವರು ವಿರುದ್ಧ ದೂರು ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.



Ads on article

Advertise in articles 1

advertising articles 2

Advertise under the article