ಮಂಗಳೂರು :ಎಂಆರ್‌ಪಿಎಲ್ ಭೀಕರ ಸ್ಫೋಟಕ್ಕೆ ನೆಲ್ಲಿದಡಿ ಗುತ್ತು ದೈವದ ಕೋಪ ಕಾರಣವೇ?: ತುಳುನಾಡಿನಲ್ಲಿ ಕಾಂತೇರಿ ಜುಮಾದಿ ನುಡಿ ಕುರಿತು ಭಾರಿ ಚರ್ಚೆ!

ಮಂಗಳೂರು :ಎಂಆರ್‌ಪಿಎಲ್ ಭೀಕರ ಸ್ಫೋಟಕ್ಕೆ ನೆಲ್ಲಿದಡಿ ಗುತ್ತು ದೈವದ ಕೋಪ ಕಾರಣವೇ?: ತುಳುನಾಡಿನಲ್ಲಿ ಕಾಂತೇರಿ ಜುಮಾದಿ ನುಡಿ ಕುರಿತು ಭಾರಿ ಚರ್ಚೆ!

ಮಂಗಳೂರು :ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಸಂಭವಿಸಿದ ಭೀಕರ ಸ್ಫೋಟ ಹಾಗೂ ಅಗ್ನಿ ಅವಘಡದ ಬೆನ್ನಲ್ಲೇ ತುಳುನಾಡಿನಾದ್ಯಂತ ಹೊಸದೊಂದು ಧಾರ್ಮಿಕ ಚರ್ಚೆ ಮುನ್ನೆಲೆಗೆ ಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದ (MSEZ) ವ್ಯಾಪ್ತಿಯಲ್ಲಿರುವ, 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ಆಕ್ರೋಶವೇ ಈ ಅಗ್ನಿ ದುರಂತಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

“ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ, ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ” ಎಂದು ದೈವ ನೀಡಿದ್ದ ಎಚ್ಚರಿಕೆಯ ನುಡಿಗೂ, ನಿನ್ನೆ ಸಂಭವಿಸಿದ ಭೀಕರ ಸ್ಫೋಟಕ್ಕೂ ನಿಕಟ ಸಂಬಂಧವಿದೆ ಎಂದು ಸ್ಥಳೀಯರು ಹಾಗೂ ದೈವಾರಾಧಕರು ಭಾವಿಸುತ್ತಿದ್ದಾರೆ. 2006ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯ (MSEZ) ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಸರ್ಕಾರವು ಬಜ್ಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಹಾಗೂ ಕಳವಾರು ಗ್ರಾಮಗಳ ಸಾವಿರಾರು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ವೇಳೆ ಗದ್ದೆಗಳು, ಮನೆಗಳು, ನಾಗಬನ ಹಾಗೂ ದೈವಸ್ಥಾನಗಳು ನೆಲಸಮಗೊಂಡಿದ್ದರೂ, 800 ವರ್ಷಗಳ ಇತಿಹಾಸವಿದ್ದ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನವನ್ನು ಕಂಪನಿಯಿಂದ ಮುಟ್ಟಲು ಸಾಧ್ಯವಾಗಿರಲಿಲ್ಲ.

Ads on article

Advertise in articles 1

advertising articles 2

Advertise under the article