BREAKING
ದಕ್ಷಿಣ ಕನ್ನಡ

ಇಂದಿನ ದಿನಭವಿಷ್ಯ: ಈ ರಾಶಿಯವರಿಗೆ ಜಮೀನು ಖರೀದಿ ಯೋಗ, ಕೆಲವರಿಗೆ ಹಣಕಾಸಿನ ಒತ್ತಡ! ದಿನಾಂಕ: 28 ನವೆಂಬರ್ 2026, ಶನಿವಾರ

 

ಇಂದಿನ ದಿನಭವಿಷ್ಯ: ಈ ರಾಶಿಯವರಿಗೆ ಜಮೀನು ಖರೀದಿ ಯೋಗ, ಕೆಲವರಿಗೆ ಹಣಕಾಸಿನ ಒತ್ತಡ!

ದಿನಾಂಕ: 28 ನವೆಂಬರ್ 2026, ಶನಿವಾರ

ಪಂಚಾಂಗ

ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು.

ತಿಥಿ: ಕಾರ್ತಿಕ ಕೃಷ್ಣ ಚತುರ್ಥಿ ಬೆಳಿಗ್ಗೆ 6:40ರವರೆಗೆ, ನಂತರ ಪಂಚಮಿ.

ನಕ್ಷತ್ರ: ಪುನರ್ವಸು ಮಧ್ಯಾಹ್ನ 12:51ರವರೆಗೆ.

ಯೋಗ: ಶುಕ್ಲ ರಾತ್ರಿ 8:18ರವರೆಗೆ.

ಕರಣ: ಬಾಲವ ಬೆಳಿಗ್ಗೆ 6:40ರವರೆಗೆ.

ರಾಹುಕಾಲ: ಬೆಳಿಗ್ಗೆ 9:00ರಿಂದ 10:30ರವರೆಗೆ.


ಇಂದಿನ ರಾಶಿಭವಿಷ್ಯ

ಮೇಷ: ನಿಮ್ಮದಲ್ಲದ ವಸ್ತು ಹಾಗೂ ವಿಚಾರಗಳನ್ನು ಅಪೇಕ್ಷಿಸುವುದು ಸಣ್ಣತನ ಎಂಬುದನ್ನು ಮರೆಯದಿರಿ. ಬದುಕಿನಲ್ಲಿ ಮಹತ್ವದ ದಿನವೆನಿಸಲಿದೆ. ಜಮೀನು ಖರೀದಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದಿಂದ ವರಮಾನ ಹೆಚ್ಚಾಗಲಿದೆ.

ವೃಷಭ: ರಾಜಕೀಯ ಕ್ಷೇತ್ರದಲ್ಲಿರುವವರು ಜನಮನ್ನಣೆ ಗಳಿಸಲಿದ್ದೀರಿ. ಮಕ್ಕಳ ಹೆಸರಿನಲ್ಲಿ ಮಾಡಬೇಕಾಗಿರುವ ಹರಕೆಯ ಕಾರ್ಯಗಳನ್ನು ಶ್ರದ್ಧೆಯಿಂದ ಆಚರಿಸಿ. ಶುಭವಾಗಲಿದೆ.

ಮಿಥುನ: ಯೋಜನೆಗಳನ್ನು ಪೂರ್ಣಗೊಳಿಸುವ ವಿಚಾರವಾಗಿ ಗಡಿಬಿಡಿಯ ವಾತಾವರಣ ಇರಲಿದೆ. ಟಿಂಬರ್ ವ್ಯಾಪಾರಿಗಳಿಗೆ ಮತ್ತು ಔಷಧ ತಯಾರಕರಿಗೆ ಉತ್ತಮ ವರಮಾನ ದೊರೆಯಲಿದೆ. ಮನೋಕಾಮನೆಗಳು ಪೂರ್ಣಗೊಳ್ಳಲಿವೆ.

ಕರ್ಕಾಟಕ: ಹಣಕಾಸಿನ ಪರಿಸ್ಥಿತಿ ದುರ್ಬಲವಾಗುವುದರಿಂದ ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ. ಉದ್ಯೋಗ ಕ್ಷೇತ್ರದಲ್ಲಿ ಅಕ್ಕಪಕ್ಕದವರ ಅನುಕಂಪ ಮತ್ತು ಸಹಾಯಕ್ಕೆ ಮಾರುಹೋಗಬೇಡಿ.

ಸಿಂಹ: ವಿವಾಹಕ್ಕಾಗಿ ವರಾನ್ವೇಷಣೆಯ ಹಂತದಲ್ಲಿರುವ ಕನ್ಯೆಯರು ಬಂದ ಮದುವೆ ಸಂಬಂಧವನ್ನು ಪರಿಶೀಲಿಸದೆ ಮಾತುಕತೆ ನಡೆಸಬೇಡಿ. ಬಟ್ಟೆ ವ್ಯಾಪಾರಿಗಳು ರಿಯಾಯಿತಿ ಮಾರಾಟದ ಮೂಲಕ ಹೆಚ್ಚಿನ ಲಾಭ ಪಡೆಯಲಿದ್ದಾರೆ.

ಕನ್ಯಾ: ಭೂಮಿ ಖರೀದಿಯ ದಾಖಲೆಗಳ ಬಗ್ಗೆ ಹಾಗೂ ಕಾನೂನಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಗಮನಹರಿಸಬೇಕು. ಕಷ್ಟದ ಪರಿಸ್ಥಿತಿ ಕ್ಷಣಿಕವಾಗಿದ್ದು, ಬೇಸರಪಡುವ ಅವಶ್ಯಕತೆಯಿಲ್ಲ.

ತುಲಾ: ನಿರಂತರ ಔಷಧ ಸೇವನೆಯಿಂದ ಆರೋಗ್ಯ ಉತ್ತಮ ಸ್ಥಿತಿಗೆ ಬರಲಿದೆ. ಸ್ನೇಹ ಸಂಬಂಧಗಳಿಗೆ ಪ್ರಾಶಸ್ತ್ಯ ನೀಡುವುದು ಒಂದು ರೀತಿಯ ಜೀವನ ಭದ್ರತೆಯಾಗಿರುತ್ತದೆ.

ವೃಶ್ಚಿಕ: ಪಶು ಆಹಾರ ಮಾರಾಟಗಾರರಿಗೆ ಅಧಿಕ ಲಾಭ ಕಂಡುಬರಲಿದೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿ ಇರಲಿದೆ. ಪ್ರೀತಿಪಾತ್ರರೊಂದಿಗೆ ಆತ್ಮೀಯ ಒಡನಾಟ ಇರಲಿ.

ಧನು: ಸಿಹಿತಿಂಡಿ ತಯಾರಿಸಿ ಮಾರಾಟ ಮಾಡುವವರಿಗೆ ಬೇಡಿಕೆ ಹೆಚ್ಚಲಿದೆ. ಎಲ್ಲ ಕೆಲಸಗಳೂ ತ್ವರಿತಗತಿಯಲ್ಲಿ ಸಾಗಲಿವೆ. ಶೀತವನ್ನು ಹೋಗಲಾಡಿಸಿಕೊಳ್ಳುವ ವಿಚಾರವಾಗಿ ಆಯುರ್ವೇದದ ಮೊರೆ ಹೋಗಿ.

ಮಕರ: ರಾಜಕೀಯ ರಂಗದಲ್ಲಿರುವವರು ನಿರ್ಲಿಪ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಬೇರೆಯವರಿಗೆ ಎದುರಾದ ಸೋಲು ಹಾಗೂ ಅಪವಾದಗಳಿಗೆ ಹೆದರಿ ಹೊಸ ಕೆಲಸಗಳನ್ನು ಪ್ರಾರಂಭಿಸದೆ ಇರಬೇಡಿ.

ಕುಂಭ: ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವೆ ಇರುವ ಮನಸ್ತಾಪವನ್ನು ನೀವೇ ಬಗೆಹರಿಸಿಕೊಳ್ಳಿ. ದುರ್ಗಾಪರಮೇಶ್ವರಿಯ ಆರಾಧನೆಯಿಂದ ಕಷ್ಟಗಳು ದೂರವಾಗಲಿವೆ. ಎಲ್ಲವೂ ಶುಭ ತರಲಿದೆ.

ಮೀನ: ಉನ್ನತ ಶಿಕ್ಷಣ ಪಡೆಯುವ ಗುರಿ ಸಾಧಿಸಲು ಪರಿಶ್ರಮ ಅಗತ್ಯವಾಗಲಿದೆ. ನನ್ನಂತೆಯೇ ಇರಬೇಕೆಂಬ ಮನೋಭಾವದಿಂದ ಸ್ನೇಹ ಹಾಳಾಗಬಹುದು. ನವವಿವಾಹಿತರಿಗೆ ಸಂತಾನ ಭಾಗ್ಯದ ಸೂಚನೆಗಳಿವೆ.

📢 ಡೇ ಕರ್ನಾಟಕ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!