ಅರಬ್ ದೇಶದಲ್ಲಿ ಹೊಸ ಭಾಷ್ಯ ಬರೆದ ಕೃಷ್ಣವಾಣಿ- 15 ಕೋಟಿಗೂ ಅಧಿಕ ಭಗವದ್ಗೀತೆ ಪ್ರತಿಗಳು ಸೇಲ್ - ವಿದೇಶಗಳಲ್ಲೂ ಸಂಚಲನ ಮೂಡಿಸಿದ ಭಾರತದ ಶ್ರೇಷ್ಠ ಧರ್ಮ ಗ್ರಂಥ ಭಗವದ್ಗೀತೆ.

ಅರಬ್ ದೇಶದಲ್ಲಿ ಹೊಸ ಭಾಷ್ಯ ಬರೆದ ಕೃಷ್ಣವಾಣಿ- 15 ಕೋಟಿಗೂ ಅಧಿಕ ಭಗವದ್ಗೀತೆ ಪ್ರತಿಗಳು ಸೇಲ್ - ವಿದೇಶಗಳಲ್ಲೂ ಸಂಚಲನ ಮೂಡಿಸಿದ ಭಾರತದ ಶ್ರೇಷ್ಠ ಧರ್ಮ ಗ್ರಂಥ ಭಗವದ್ಗೀತೆ.

ಭಾರತದ ಶ್ರೇಷ್ಠ ಧರ್ಮ ಗ್ರಂಥ ಭಗವದ್ಗೀತೆ ವಿದೇಶಗಳಲ್ಲೂ ಸಂಚಲನ ಮೂಡಿಸಿದೆ. ಅರಬ್ ದೇಶದಲ್ಲಿ ಬರೋಬ್ಬರಿ ಹದಿನೈದು ಕೋಟಿಗೂ ಹೆಚ್ಚು ಭಗವದ್ಗೀತೆ ಪ್ರತಿಗಳು ಮಾರಾಟವಾಗಿವೆ.ಈ ಬಗ್ಗೆ ಇಸ್ಕಾನ್ ಸಂಸ್ಥೆ ಅಧಿಕೃತ ಮಾಹಿತಿಯನ್ನು ನೀಡಿದೆ.
ಭಗವದ್ಗೀತೆ ಜಗತ್ತಿಗೆ ಧರ್ಮದ ಸಾರವನ್ನು ತಿಳಿಸಿದ ಮಹಾನ್ ಗ್ರಂಥ.ಕೃಷ್ಣವಾಣಿ ಎಂದು ಕರೆಯಲ್ಪಡುವ ಭಗವದ್ಗೀತೆ ಒಂದು ಮತಕ್ಕೆ ಸೀಮಿತವಾದ ಗ್ರಂಥವಲ್ಲ. ಮಾನವತೆಯ, ಆಧ್ಯಾತ್ಮಿಕತೆಯ ಸಾರವನ್ನು ಸಾರುವ ಗ್ರಂಥ. ವೇದಗಳ ಸಾರವೂ  ಜ್ಞಾನವಾಗಿದೆ.ಉಪನಿಷತ್ತುಗಳು ಮತ್ತು ಉಪನಿಷತ್ತುಗಳ ಸಾರವೂ ಗೀತೆಯಾಗಿದೆ. ಕುರುಕ್ಷೇತ್ರ ರಣರಂಗದಲ್ಲಿ ಮಹಾಭಾರತ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಜ್ಞಾನವು ಗೀತಾ ಎಂದು ಪ್ರಸಿದ್ಧವಾಯಿತು.


ಬದುಕಿನ ಎಲ್ಲಾ ಸಮಸ್ಯೆಗಳಿಗೂ ಭಗವದ್ಗೀತೆಯಲ್ಲಿ ಪರಿಹಾರವನ್ನು ನೀಡಲಾಗಿದೆ. ಗೀತೆಯಲ್ಲಿ ಎಲ್ಲಾ ರೀತಿಯ ಜ್ಞಾನವನ್ನು ನೀಡಲಾಗಿದೆ.ಇಂತಹ ಹಿಂದೂಗಳ ಶ್ರೇಷ್ಠ ಧರ್ಮ ಗ್ರಂಥವಾದ ಭಗವದ್ಗೀತೆ ವಿಶ್ವದ ಹಲವೆಡೆ ತನ್ನ ಪ್ರಭಾವ ಬೀರುತ್ತಿದೆ.ಮುಸ್ಲಿಂ ರಾಷ್ಟ್ರಗಳಲ್ಲೂ ತನ್ನ ಛಾಪು ಮೂಡಿಸಿದೆ. ಅರಬ್ ರಾಷ್ಟ್ರದಲ್ಲಿ ಹದಿನೈದು ಕೋಟಿ ಭಗವದ್ಗೀತೆ ಪ್ರತಿ ಮಾರಾಟವಾಗಿ ದಾಖಲೆ ಬರೆದಿದೆ. ಈ ಹಿಂದೆ ಭಗವದ್ಗೀತೆ ಅರೇಬಿಕ್ ಭಾಷೆಗಳಿಗೆ ಭಾಷಾಂತರಗೊಂಡಿದೆ ಎನ್ನುವ ಹೇಳಿಕೆ ನೀಡಿದಾಗ ಅನೇಕ ವೆಬ್ ಸೈಟ್ ಗಳು ಇದೂ ಸುಳ್ಳು ಮಾಹಿತಿ ಎಂದು ಹೇಳಿದ್ದೆವು. ಆದರೆ ಈ ಬಾರಿ ಹದಿನೈದು ಕೋಟಿ ಭಗವದ್ಗೀತೆ ಮಾರಾಟವಾಗಿದ್ದರ ಬಗ್ಗೆ ಖುದ್ದಾಗಿ ಇಸ್ಕಾನ್ ಸಂಸ್ಥೆಯೇ ತನ್ನ ಟ್ವಿಟ್ಟರ್ ನಲ್ಲಿ ಅಧಿಕೃತವಾಗಿ ಮಾಹಿತಿ ನೀಡಿದೆ.

ಉರ್ದು ಬಾಷೆಗೂ ಭಗವದ್ಗೀತೆ ತರ್ಜುಮೆಯಾಗಿದೆ.ಪಾಕಿಸ್ತಾನದ ಪ್ರಜೆಗಳು ಭಗವದ್ಗೀತೆಯನ್ನು ಓದುತ್ತಿದ್ದಾರೆ.ಪಾಕಿಸ್ತಾನದ ಹಿಂದುಗಳು ಮಾತ್ರವಲ್ಲ ಮುಸ್ಲಿಮರೂ ಸಹಾ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಆರಾಧಿಸುತ್ತಿದ್ದು ಆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ.ಒಟ್ಟಾರೆ ಅರಬ್ ರಾಷ್ಟ್ರಗಳಲ್ಲಿ ಹದಿನೈದು ಕೋಟಿ ಭಗವದ್ಗೀತೆ ಪ್ರತಿಗಳು ಮಾರಾಟವಾಗುವ ಮೂಲಕ ಭಾರತದ ಶ್ರೇಷ್ಠ ಗ್ರಂಥದ ಮಹತ್ವ ಇಡೀ ಜಗತ್ತಿಗೆ ಅರಿವಾಗುತ್ತಿದೆ.

Ads on article

Advertise in articles 1

advertising articles 2

Advertise under the article