ಲೋನ್ ಬಾಕಿ ಇದೆ ಎಂದು ಕರೆ ಬಂದ್ರೆ ನಾನು ಸತ್ತು ಹೋಗಿದ್ದೇನೆ ಎಂದು ಹೇಳಿ ! -ಹೀಗೆ ಬರೆದಿಟ್ಟು ಸೂಸೈಡ್ ಮಾಡಿಕೊಂಡಿರುವ ಯುವಕ
Thursday, December 30, 2021
ಉಡುಪಿ: "ಲೋನ್ ಬಾಕಿ ಇದೆ ಎಂದು ಕರೆ ಬಂದ್ರೆ ನಾನು ಸತ್ತು ಹೋಗಿದ್ದೇನೆ ಹೇಳಿ" ಎಂದು ಡೆತ್ ನೋಟ್ ಬರೆದಿಟ್ಟು ಯುವಕ ಸೂಸೈಡ್ ಮಾಡಿಕೊಂಡಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.ಮೃತನನ್ನು ಕುಂದಾಪುರದ ಹೆಮ್ಮಾಡಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ.
ಮೊಬೈಲ್ ಆಪ್ ಮೂಲಕ ಸಾಲ ಮಾಡಿದ್ದ ವಿಘ್ನೇಶ್ ಸಾಲ ಮರುಪಾವತಿ ಮಾಡಲಾಗದೆ ಮನೆಯ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸ್ನೇಹಿತರ ಜೊತೆಗೆ ಸೇರಿ ಬಿಸಿನೆಸ್ ಆರಂಭಿಸಲು ಸಾಲ ಮಾಡಿದ್ದ ವಿಘ್ನೇಶ್ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ.
ಡೆತ್ ನೋಟ್ ನಲ್ಲಿ " ನನ್ನ ಸಾವಿಗೆ ನಾನು ಮೊಬೈಲ್ ಆಪ್ ನಲ್ಲಿ ಮಾಡಿಕೊಂಡಿರುವ ಸಾಲ ತೀರಿಸಲು ಆಗುತ್ತಿಲ್ಲ.ಆದರಿಂದ ನಾನು ಸುಸೈಡ್ ಮಾಡಿಕೊಳ್ಳುತ್ತಿದ್ದೇನೆ.ನನ್ನ ಲೋನ್ ಇದೆ ಕಟ್ಟಿ ಅಂತಾ ಯಾರಾದರೂ ಕಾಲ್ ಮಾಡಿದ್ರೆ ಸತ್ತು ಹೋದ ಅಂತಾ ಹೇಳಿ ಬಿಡಿ.ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ.ಕ್ಷಮಿಸಿ.ಆಫೀಸ್ ಗೆ ನನ್ನ ಸಾವಿನ ಸುದ್ದಿ ತಿಳಿಸಿಬಿಡಿ." ಶುಕ್ರವಾರ ಸಾಲರಿ ಬರುತ್ತೆ ಅಂತಾ ಡೆತ್ ನೋಟ್‌ನಲ್ಲಿ ತನ್ನ ಎಟಿಎಂ ಪಾಸ್‌ವರ್ಡ್ ಅನ್ನೂ ನಮೂದಿಸಿ ಸಾವಿಗೆ ಶರಣಾಗಿದ್ದಾನೆ.ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.