ಕೊರಗಜ್ಜನ ಕಟ್ಟೆಗೆ ಕಾಂಡೋಮ್ ಎಸೆದು ವಿಕೃತಿ ಮೆರೆದವ ಕೊನೆಗೂ ಅರೆಸ್ಟ್! ಬಂಧನದ ಬೆನ್ನಲ್ಲೇ ಆಘಾತಕಾರಿ ರಹಸ್ಯ ಬಯಲು
Wednesday, December 29, 2021
ಮಂಗಳೂರು:ಮಾರ್ನೆಮಿಕಟ್ಟೆ ಬಳಿಯಿರುವ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿ ಮೇಲೆ ಕಾಂಡೋಮ್ ಇಟ್ಟವನಿಗೆ ಮಂಗಳೂರು ಪೊಲೀಸರು ಕೊನೆಗೂ ಕೋಳ ತೊಡಿಸಿದ್ದಾರೆ.ಕೊರಗಜ್ಜನ ದೈವಸ್ಥಾನ ಸೇರಿದಂತೆ ಒಟ್ಟು 18 ಧಾರ್ಮಿಕ ಕ್ಷೇತ್ರಗಳಿಗೆ ಅಶ್ಲೀಲ ವಸ್ತು ಎಸೆದು ಅಪವಿತ್ರಗೊಳಿಸಿದ್ದು ಈತನೇ ಎಂಬ ಆಘಾತಕಾರಿ ರಹಸ್ಯ ಇವನ ಬಂಧನದಿಂದ ಬಯಲಾಗಿದೆ.ಮೂಲತಃ ಹುಬ್ಬಳ್ಳಿ ಮೂಲದ, ಪ್ರಸ್ತುತ ಮಂಗಳೂರಿನ ಕೋಟೆಕಾರ್ ಕೊಂಡಾಣ ನಿವಾಸಿ ದೇವದಾಸ್ ದೇಸಾಯಿ(62) ಬಂಧಿತ ಆರೋಪಿಯಾಗಿದ್ದಾನೆ.
ಡಿಸೆಂಬರ್ 19(ಸೋಮವಾರ) ರಾತ್ರಿ ನಗರದ ಮಾರ್ನಮಿಕಟ್ಟೆಯ ಕೊರಗಜ್ಜನ ಲಕಟ್ಟೆಗೆ ಬಳಸಿದ ನಿರೋದ್ ಎಸೆದು ಅಪಚಾರವೆಸಗಿದ್ದ.ಕಿಡಿಗೇಡಿ ಪತ್ತೆಗೆ ಪೊಲೀಸರು ಬಲೆ ಬೀಸುತ್ತಿದ್ದಂತೆ ದೇವದಾಸ್ ದೇಸಾಯಿ ಸಿಕ್ಕಿಬಿದ್ದಿದ್ದಾನೆ. ಅರೋಪಿ ಈ ದೈವಸ್ಥಾನ ಮಾತ್ರವಲ್ಲ, ಒಟ್ಟು 18 ಧಾರ್ಮಿಕ ಕೇಂದ್ರಗಳ ಮೇಲೂ ಇಂತಹದ್ದೇ ಕುಕೃತ್ಯ ಎಸಗಿದ್ದಾನೆ. ಅದರಲ್ಲಿ ಕೊರಗಜ್ಜನ ಕಟ್ಟೆ,ದೈವಸ್ಥಾನ,ದೇವಸ್ಥಾನ, ನಾಗನ ಕಟ್ಟೆ, ದರ್ಗಾ ಕೂಡ ಸೇರಿದೆ.
ಪೊಲೀಸ್ ಆಯುಕ್ತ ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿ "ಅರೋಪಿ ಮಾನಸಿಕ ಅಸ್ವಸ್ಥನಲ್ಲ,ಈತನ ತಂದೆ ಜಾನ್ ದೇಸಾಯಿ ಹಿಂದು ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಈತ ಕೂಡ ಕ್ರೈಸ್ತ ಧರ್ಮವನ್ನು ಪಾಲಿಸುತ್ತಿದ್ದಾನೆ,ಈತನ ಕುಟುಂಬ ಕೂಡಾ ಈತನನ್ನು ತೊರೆದಿದ್ದು ಮಂಗಳೂರಿನ ಒಬ್ಬಂಟಿಯಾಗಿ ವಾಸಿಸುತ್ತಿದ್ದ. ಧಾರ್ಮಿಕ ಕೇಂದ್ರಗಳಿಗೆ ಕಾಂಡೋಮ್, ಕ್ರೈಸ್ತ ಧರ್ಮದ ಭಿತ್ತಿಪತ್ರಗಳನ ಹಾಕುತ್ತಿದ್ದದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ" ಎಂದು ಹೇಳಿದ್ದಾರೆ.
“ಭೂಮಿ ಅಂತ್ಯವಾಗುವ ಸಮಯ ಹತ್ತಿರ ಬಂದಿದೆ.ಅದು ಏಸುವಿನಿಂದ ಮಾತ್ರ ಸಾದ್ಯ. ದೇವರು ನಮ್ಮನ್ನು ರಕ್ಷಿಸಬೇಕಾದರೆ, ಆತನೇ ಶ್ರೇಷ್ಠ ಎಂದು ಸಾರಬೇಕಾಗಿದ್ದು ನಮ್ಮ ಕರ್ತವ್ಯ, ಅದಕ್ಕಾಗಿ ಈ ಕೃತ್ಯ ಎಸಗಿದ್ದೇನೆ. ಇದಕ್ಕೆ ಯಾವುದೇ ಪಶ್ಚಾತಾಪ ಇಲ್ಲ” ಎಂದು ಪೊಲೀಸರ ಬಳಿ ಆರೋಪಿ ಹೇಳಿಕೊಂಡಿದ್ದಾನೆ