ದಾಂಪತ್ಯ ಜೀವನಕ್ಕೆ ಕಾಲಿಟ್ಟ ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತೆ ಅಥ್ಲೇಟ್ ಎಂಆರ್ ಪೂವಮ್ಮ
Wednesday, December 29, 2021
ಮಂಗಳೂರು: ಏಷ್ಯನ್ ಗೇಮ್ಸ್ ನ ಚಿನ್ನದ ಪದಕ ವಿಜೇತೆ ಕರ್ನಾಟಕದ ಅಥ್ಲೇಟ್ ಎಂಆರ್ ಪೂವಮ್ಮ ಇಂದು ಕೇರಳದ ಅಥೇಟ್ ಜಿತಿನ್ ಪೌಲ್ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ವಿವಾಹ ನೆರವೇರರಿದೆ. ಜನವರಿ 1 ರಂದು ಕೇರಳದ ತ್ರಿಶೂರ್‌ನಲ್ಲಿ ಔತಣಕೂಟ ನಡೆಯಲಿದೆ.
ಪೂವಮ್ಮ ಹಾಗೂ ಜಿತಿನ್ ಬಹುಕಾಲದ ಸ್ನೇಹಿತರಾಗಿದ್ದು, ಇದೀಗ ಸಪ್ತಪದಿ ತುಳಿದು ಕ್ರೀಡಾ ದಂಪತಿಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕೊಡಗು ಮೂಲದ 31 ವರ್ಷದ ಪೂವಮ್ಮ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿದ್ದಾರೆ. 2014ರ ಇಂಚೋನ್ ಏಷ್ಯಾಡ್‌ನಲ್ಲಿ 1 ಸ್ವರ್ಣ, 1 ಕಂಚು ಹಾಗೂ 2018ರ ಜಕಾರ್ತ ಏಷ್ಯಾಡ್‌ನಲ್ಲಿ 2 ಬಂಗಾರ ಪದಕವನ್ನು ಗೆದ್ದಿದ್ದರು. 2008ರ ಬೀಜಿಂಗ್ ಮತ್ತು 2016ರ ರಿಯೋ ಒಲಿಂಪಿಕ್ಸ್ ರಿಲೇ ತಂಡದಲ್ಲಿ ಭಾಗವಹಿಸಿದ್ದರು. ಗಾಯದ ಸಮಸ್ಯೆಯಿಂದಾಗಿ ಅವರಿಗೆ 2021ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮಂಗಳೂರು ಒಎನ್‌ಜಿಸಿ ಉದ್ಯೋಗಿಯಾಗಿರುವ ಪೂವಮ್ಮ 2015ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಷ್ಯಾಡ್-ಕಾಮನ್ವೆಲ್ತ್ ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದ ಜಿತಿನ್ ಪೌಲ್ ಪುಣೆಯಲ್ಲಿ ಆದಾಯ ತೆರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.