18 ವರ್ಷಗಳ ದಾಂಪತ್ಯಕ್ಕೆ ಪೂರ್ಣವಿರಾಮ ಇಟ್ಟ ತಮಿಳು ಖ್ಯಾತ ನಟ ಧನುಷ್-ರಜನಿಕಾಂತ್ ಪುತ್ರಿ ಐಶ್ವರ್ಯಾ; ಕಾರಣವೇನು?(Dhanush,Aishwarya divorce)
Monday, January 17, 2022
ಕಾಲಿವುಡ್ ಖ್ಯಾತ ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ತಮ್ಮ 18 ವರ್ಷದ ದಾಂಪತ್ಯ ಜೀವನಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈರ್ವರೂ ಮಾಹಿತಿ ನೀಡಿದ್ದು, ದೀರ್ಘಕಾಲದ ಯೋಚನೆ ನಂತರ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ನಟ ಧನುಷ್, "ಕಳೆದ 18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಜತೆಗೆ ಇದ್ದೇವೆ. ಈ ಹಾದಿಯಲ್ಲಿ ಇಬ್ಬರೂ ಬೆಳವಣಿಗೆ ಕಂಡಿದ್ದೇವೆ. ಒಟ್ಟಿಗೇ ನಕ್ಕಿದ್ದೇವೆ, ಅತ್ತಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ, ಹೊಂದಾಣಿಕೆ ಏನೆಂದು ತಿಳಿದಿದ್ದೇವೆ.ಇದೀಗ ಇಬ್ಬರ ದಾರಿಯೂ ಬೇರೆ ಬೇರೆಯಾಗಿದೆ. ನಾನು ಐಶ್ವರ್ಯ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದೇವೆ.ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿ '‘ಓಂ ನಮಃ ಶಿವಾಯ’’ ಎಂದು ಬರೆದು ತಮ್ಮ ಬರಹ ಮುಕ್ತಾಯಗೊಳಿಸಿದ್ದಾರೆ.
ವಿಚ್ಚೇದನದ ಕುರಿತು ಐಶ್ವರ್ಯಾ ರಜನಿಕಾಂತ್ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಬರೆದುಕೊಂಡಿದ್ದು, ‘‘ಯಾವುದೇ ಕ್ಯಾಪ್ಶನ್ ಅಗತ್ಯವಿಲ್ಲ. ನಿಮ್ಮ ಸಹಕಾರ ಹಾಗೂ ಪ್ರೀತಿ ಇರಲಿ’’ ಐಶ್ವರ್ಯಾ ರಜಿನಿಕಾಂತ್ ಎಂದು ಕೊನೆಯಲ್ಲಿ ಬರೆದು ಅವರು ಬರಹವನ್ನು ಮುಕ್ತಾಯಗೊಳಿಸಿದ್ದಾರೆ.
ಐಶ್ವರ್ಯಾ ಅವರು ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಹಿರಿಯ ಪುತ್ರಿ. ವೃತ್ತಿಯಲ್ಲಿ ಅವರು ಸಿನಿಮಾ ನಿರ್ದೇಶಕಿ ಹಾಗೂ ಗಾಯಕಿ. 2004 ನವೆಂಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನುಷ್ ಹಾಗೂ ಐಶ್ವರ್ಯಾ ಜೋಡಿಗೆ ಯಾತ್ರಾ ಹಾಗೂ ಲಿಂಗಾ ಎಂಬ ಈರ್ವರು ಪುತ್ರರಿದ್ದಾರೆ.