'ಹಿಂದುಗಳೇ ಮಸೀದಿ ಒಡೆಯಿರಿ" ಪ್ರಚೋದನಕಾರಿ ಹೇಳಿಕೆ: ಕಾಳಿ ಮಠದ ಋಷಿಕುಮಾರಸ್ವಾಮಿ ಅರೆಸ್ಟ್(Rishikumara swami arrest)
Monday, January 17, 2022
ಮಂಡ್ಯ :ಹಿಂದುಗಳೇ ಮಸೀದಿ ಒಡೆಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಕಾಳಿಮಠದ ಋಷಿಕುಮಾರಸ್ವಾಮಿಯನ್ನು ಚಿಕ್ಕಮಗಳೂರಿನ, ಕಡೂರು ದೇವನೂರಿನ ಕಾಳಿ ಮಠದಲ್ಲಿ ಮಂಡ್ಯದ ಶ್ರೀರಂಗಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಋಷಿಕುಮಾರ ಸ್ವಾಮೀಜಿ ಹಿಂದುಗಳೇ ಮಸೀದಿ ಒಡೆಯಿರಿ ಎನ್ನುವ ಪ್ರಚೋದನಕಾರಿ ಹೇಳಿಕೆ ನೀಡಿದ್ದು ಮಾತ್ರವಲ್ಲದೆ ಆ ಹೇಳಿಕೆಯನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿ ಕೋಮುಗಲಭೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಬಂಧಿಸಲಾಗಿದೆ.
ಋಷಿಕುಮಾರ ಸ್ವಾಮಿ ಶ್ರೀರಂಗಪಟ್ಟಣದ ಮಸೀದಿ ಮುಂದೆ ವಿಡಿಯೋ ಮಾಡಿ ಬಾಬರಿ ಮಸೀದಿ ಒಡೆದ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಒಡೆಯಬೇಕು ಈ ಮಸೀದಿಯಲ್ಲಿ ಅದ್ಬುತವಾದ ಶಿಲೆಗಳಿದ್ದು ಇದು ದೇವಸ್ಥಾನಕ್ಕೆ ಸಂಬಂಧಿಸಿದ ಕಟ್ಟಡವಾಗಿದೆ. ಶ್ರೀರಂಗಪಟ್ಟಣದ ದೇವಸ್ಥಾನವನ್ನು ಮುಸ್ಲಿಂ ಸಮುದಾಯ ಮಸೀದಿ ಮಾಡಿಕೊಂಡಿದ್ದಾರೆ.ಹಿಂದೂಗಳು ಜಾಗರೂಕರಾಗಿ, ಅತಿಬೇಗ ಒಡೆಯಬೇಕಾದ ಮಸೀದಿ ಇದು ಎಂದು ವಿವಾದಾತ್ಮಕ ಹೇಳಿಕೆ ನೀಡಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.