2 ತಿಂಗಳು ಕಳೆದರೂ ಕಡಿಮೆಯಾಗದ ಅಪ್ಪು ಅಭಿಮಾನ- ಪುನೀತ್ ಫೋಟೋ ಮುಂದೆ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ

2 ತಿಂಗಳು ಕಳೆದರೂ ಕಡಿಮೆಯಾಗದ ಅಪ್ಪು ಅಭಿಮಾನ- ಪುನೀತ್ ಫೋಟೋ ಮುಂದೆ ಹಾರ ಬದಲಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ


ಪುನೀತ್ ರಾಜ್ ಕುಮಾರ್ ಅಗಲಿ ಎರಡು ತಿಂಗಳಾದ್ರೂ ಸಹ ಅಪ್ಪುವಿನ ಮೇಲಿನ ಅಭಿಮಾನ ಮಾತ್ರ ಕಮ್ಮಿಯಾಗಿಲ್ಲ. ಇನ್ನಷ್ಟು ನವಜೋಡಿ ಅಪ್ಪು ಫೋಟೋ ಮುಂದೆ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 
 
ಸದ್ಯ ಮದುವೆ ಮಂಟಪದಲ್ಲಿ ಸಂಭ್ರಮದ ಜೊತೆಗೆ ಪುನೀತ್ ರಾಜ್ ಕುಮಾರ್ ಭಾವಚಿತ್ರ ಇಟ್ಟು ಅಭಿಮಾನ ತೋರಿಸ್ತಾ ಇರೋದು ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದ ಮಹಾಂತೇಶ್ ಹಾಗೂ ಸಾನ್ವಿ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಹುಟ್ಟಿ 2ತಿಂಗಳಾದರೂ ಅವರ ನೆನಪು ಮಾತ್ರ ಗಡಿ ಜಿಲ್ಲೆಯ ಜನರಲ್ಲಿ ಅಚ್ಚಳಿಯದೇ ಉಳಿದಿದೆ ಮದುವೆ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಅಗಲಿದ ನಾಯಕ ನಟನಿಗೆ ಗೌರವ ಸಲ್ಲಿಸುವುದರ ಜೊತೆಗೆ ಪುನೀತ್ ಭಾವಚಿತ್ರ ಚತುರೆ ಅಕ್ಷತೆ ಹಾಕಿಸಿಕೊಂಡಿತ್ತು ಪುನೀತ್  ಇನ್ನು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುವುದಕ್ಕೆ ಸಾಕ್ಷಿ.

ಇದು ನವ ಜೋಡಿಗೆ ಶುಭ ಹಾರೈಸಲು ಬಂದ ಜನ ಕೂಡ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿತ್ತು, ಅಲ್ಲದೆ ಅಭಿಮಾನಿಗಳು ಜೋಡಿಗೆ ಪುನೀತ್ ಭಾವಚಿತ್ರ ನೀಡಿ ಹಾರೈಸಿದ್ರು.

ಒಟ್ಟಿನಲ್ಲಿ ಪುನೀತ್ ನಿಧನರಾಗಿ ಎರಡು ತಿಂಗಳಾದ್ರೂ ಅವರ ಮೇಲಿನ ಅಭಿಮಾನ ಜನರಲ್ಲಿ ಸ್ವಲ್ಪ ಕೂಡ ಕಡಿಮೆ ಆಗಿಲ್ಲ. ಮದುವೆಯಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ

Ads on article

Advertise in articles 1

advertising articles 2

Advertise under the article