ಮಂಗಳೂರು: ಕೊರೋನಾ 3 ನೇ ಅಲೆ ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸರ್ವ ಸನ್ನದ್ಧ
Thursday, January 6, 2022
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೋನಾ ಮೂರನೇ ಅಲೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ ಎಂದು ಜಿಲ್ಲಾ ವೆನ್ಹಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸದಾಶಿವ ಶಾನುಭಾಗ್ ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಒಟ್ಟು 905 ಬೆಡ್ ಗಳ ವ್ಯವಸ್ಥೆಯಿದ್ದು, ಅದರಲ್ಲಿ 480 ಬೆಡ್ ಗಳಿಗೆ ಸೆಂಟ್ರಲ್ ಆಕ್ಸಿಜನ್ ವ್ಯವಸ್ಥೆಯನ್ನು ಮಾಡಲಾಗಿದೆ. 3 ಆಕ್ಸಿಜನ್ ಪ್ಲಾಂಟ್ ಗಳು ಕಾರ್ಯಚರಣೆ ಮಾಡುತ್ತಿದ್ದು 12 KLB ಸಾಮಥ್ಯವುಳ್ಳ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೇಜ್ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ದ.ಕ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗುವ ಸಾಧ್ಯತೆಯಿಲ್ಲ ಎಂದಿದ್ದಾರೆ.
ಅದೇ ರೀತಿ 30 ರಿಂದ 35 ಮೆಡಿಕಲ್ ICU ಬೆಡ್ ಇದ್ದು, 30 ಬೆಡ್ ಗಳ ಮಕ್ಕಳ ಐಸಿಯುವನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೆ 2 ಸುಸಜ್ಜಿತ ಐಸಿಯು, 20 ಬೆಡ್ ಗಳ ಸರ್ಜಿಕಲ್ ಮತ್ತು ಎಮರ್ಜೆನ್ಸಿ ಐಸಿಯು ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಯಾರೂ ಆತಂಕಪಡುವ ಅವಶ್ಯಕತೆಯಿಲ್ಲವೆಂದು ಡಾ.ಸದಾಶಿವ ಶಾನುಭಾಗ್ ಹೇಳಿದರು.