ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷದ ಹುಲಿ ‘ಓಲಿವರ್’ ಕುಸಿದುಬಿದ್ದು ಸಾವು
Tuesday, January 4, 2022
ಮಂಗಳೂರು: ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ 9 ವರ್ಷ ಪ್ರಾಯದ ಒಲಿವರ್ ಹೆಸರಿನ ಹುಲಿಯೊಂದು ಇಂದು ( ಮಂಗಳವಾರ) ಬೆಳಗ್ಗೆ ಮೃತಪಟ್ಟಿದೆ.
ಇಂದು ಮುಂಜಾನೆವರೆಗೂ ಸದೃಢವಾಗಿ ಆರೋಗ್ಯವಾಗಿದ್ದ ಹುಲಿ ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಿಸಲಿಲ್ಲ.ಇದು ವಿಕ್ರಂ ಹಾಗೂ ಶಾಂಭವಿ ಹುಲಿಗೆ ಜನಿಸಿದ್ದ ಎರಡು ಮರಿಗಳಲ್ಲಿ ಒಲಿವರ್ ಗೆ ಒಂಭತ್ತು ವರ್ಷ ಪ್ರಾಯ ಆಗಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್.ಜೆ.ಭಂಡಾರಿ "ಮೃತಪಟ್ಟ ಹುಲಿಯ ಅಂಗಾಂಗಗಳನ್ನು ಪ್ರಾಣಿ ಆರೋಗ್ಯ ಹಾಗೂ ಪಶು ಜೈವಿಕ ಶ ಸಂಸ್ಥೆ ಬೆಂಗಳೂರಿನ ಹಾಗೂ ಉತ್ತರ ಪ್ರದೇಶದ ಭಾರತೀಯ ಪಶು ಸಂಶೋಧನಾ ಸಂಸ್ಥೆಗೆ ಕಳುಹಿಸಿ ಕೊಡಲಾಗಿದೆ.ಕರೋನಾ ಪರೀಕ್ಷೆಗಾಗಿ ಭೋಪಾಲದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯರಿಟಿ ಎನಿಮಲ್ ಡಿಸೀಸಸ್‌ಗೆ ಕಳುಹಿಸಿಕೊಡಲಾಗಿದ್ದು, ಇತರ ಪ್ರಾಣಿಗಳಿಗೆ ರೋಗ ಹರಡದಂತೆ ರೋಗ ನಿರೋಧಕ ದ್ರಾವಣವನ್ನು ಆವರಣದ ಸುತ್ತಮುತ್ತ ಸಿಂಪಡಿಸಲಾಗುತ್ತಿದೆ" ಎಂದಿದ್ದಾರೆ.