ತಿರುಪತಿ ತಿಮ್ಮಪ್ಪನ ಖಜಾನೆಗೆ ಹರಿದು ಬಂದ ಹಣದ ಹೊಳೆ-ಕಳೆದ ಒಂದು ವರ್ಷದಲ್ಲಿ ವಿಶ್ವದ ಶ್ರೀಮಂತ ದೇವಳದಲ್ಲಿ ಸಂಗ್ರಹವಾದ ಮೊತ್ತ ಎಷ್ಟು ಕೋಟಿ ಗೊತ್ತಾ....!
Monday, January 3, 2022
ಎಲ್ಲಿ ನೋಡಿದ್ರೂ ಹಣ ಹಣ ಹಣ
ನೋಟು ಹಾಗೂ ನಾಣ್ಯಗಳು ಎದುಸುತ್ತಿರುವ ಜನ
ಕೈಯಲ್ಲಿ ಎಣಿಸಲು ಸಾಧ್ಯವಾಗದೆ ನೋಟು ಮಷಿನ್ ನಲ್ಲಿ ದುಡ್ಡಿನ ಎಣಿಕೆ ಇದೇನು ಕುಬೇರನ ಅರಮನೆ ಅದ್ಕೊಂಡ್ರಾ ಖಂಡಿತ ಅಲ್ಲ, ಇದು ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲೊಂದಾದ ತಿರುಪತಿ ವೆಂಕಟೇಶ್ವರ ದೇಗುಲದ ಹುಂಡಿಯಲ್ಲಿ ಸಂಗ್ರಹವಾದ ಹಣ
ಕರುನಾ ಹೊಡೆತಕ್ಕೆ ವಿಶ್ವದ ಆರ್ಥಿಕತೆ ಕುಸಿಯುತ್ತದೆ ಇತ್ತ ತಿಮ್ಮಪ್ಪನ ಹುಂಡಿಗೆ ಮಾತ್ರ ಹಣದ ಹೊಳೆ ಹರಿದು 2020 ಜನವರಿ ಒಂದರಿಂದ ಡಿಸೆಂಬರ್ ಮೂವತ್ತು ರವರೆಗೂ ಅಂದ್ರೆ ಕಳೆದೊಂದು ವರ್ಷದಲ್ಲಿ 833 ಕೋಟಿ ರೂ ಸಂಗ್ರಹವಾಗಿದೆ. ಕರೋನಾ ಎರಡನೇ ಅಲೆ ಬಳಿಕ ಈ ವರ್ಷದಲ್ಲಿ ಸುಮಾರು 1.4ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ದೇವಳದ ಆಡಳಿತ ಮಂಡಳಿಯು 5.96ಕೋಟಿ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸುವ ಜತೆಗೆ ಸುಮಾರು 1.37 ಕೋಟಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗಿದೆ.ಇನ್ನು ದೇವಾಲಯಕ್ಕೆ ನೀಡಿದ 1.4ಕೋಟಿ ಭಕ್ತರಲ್ಲಿ 48.75ಲಕ್ಷ ಮಂದಿ ದೇವರಿಗೆ ಮುಡಿ ನೀಡಿದ್ದಾರೆ ಎನ್ನಲಾಗಿದೆ.