Afghan: ಸಂಗೀತಗಾರನ ಮುಂದೆಯೇ ಆತನ ಸಂಗೀತ ಸಾಧನವನ್ನು ತಾಲಿಬಾನಿಗಳು: ಅಳುತ್ತಿರುವ ಸಂಗೀತಗಾರನನ್ನು ನೋಡಿ ನಗುತ್ತಿದ್ದ ಸಿಬ್ಬಂದಿ

Afghan: ಸಂಗೀತಗಾರನ ಮುಂದೆಯೇ ಆತನ ಸಂಗೀತ ಸಾಧನವನ್ನು ತಾಲಿಬಾನಿಗಳು: ಅಳುತ್ತಿರುವ ಸಂಗೀತಗಾರನನ್ನು ನೋಡಿ ನಗುತ್ತಿದ್ದ ಸಿಬ್ಬಂದಿ

 ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ವಶಕ್ಕೆ ಪಡೆದ ಬಳಿಕ ಅಲ್ಲಿನ ಜನರ ಪಾಡು ಶೋಚನೀಯವಾಗಿದೆ. ಒಂದರ ಮೇಲೊಂದು ವಿಚಾರಗಳಿಗೆ ತಾಲಿಬಾನ್ ತನ್ನದೇ ಆದ ಕಟ್ಟುಪಾಡು, ನಿಯಮಗಳನ್ನು ರೂಪಿಸುತ್ತಿದೆ. ಅದರಲ್ಲಿ ಸಂಗೀತದ ಮೇಲಿನ ನಿರ್ಬಂಧವೂ ಒಂದಾಗಿದೆ.

ಅಫ್ಘಾನ್ ನ ಪಕ್ತೀಯಾ ಪ್ರಾಂತ್ಯದಲ್ಲಿ ಸಂಗೀತಗಾರನ ಮುಂದೆಯೇ ಆತನ ಸಂಗೀತ ಸಾಧನವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಇದನ್ನು ಕಣ್ಣಾರೆ ಕಂಡ ಸಂಗೀತಗಾರ ಬಿಕ್ಕಿಬಿಕ್ಕಿ ಅತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋವನ್ನು ಅಫ್ಘಾನ್ ನ ಪತ್ರಕರ್ತ ಅಬ್ದುಲ್ ಹಕ್ ಒಮೆರಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.




ತಾಲಿಬಾನಿಗಳು ಸಂಗೀತಗಾರನ ಸಂಗೀತ ಉಪಕರಣವನ್ನು ಸುಟ್ಟು ಹಾಕಿದ್ದಲ್ಲದೇ, ಆತನ ಎದುರು ಅಣಕಿಸಿ ಕುಹಕವಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಮತ್ತೊಬ್ಬ ವ್ಯಕ್ತಿ ಸಂಗೀತಗಾರನ ಪರಿಸ್ಥಿತಿಯನ್ನು ವಿಡಿಯೋ ಮಾಡುತ್ತಿದ್ದದ್ದು ಕಾಣುತ್ತಿದೆ.

ಅಫ್ಘಾನಿಸ್ತಾನದಲ್ಲಿ ವಾಹನಗಳಲ್ಲಿ ಸಂಗೀತ ಕೇಳುವುದು, ಮದುವೆ ಮನೆಯಲ್ಲಿ ಸಂಗೀತ ಕೇಳುವುದನ್ನು ಕೂಡ ತಾಲಿಬಾನ್ ಸರ್ಕಾರ ನಿಷೇಧಿಸಿದೆ. ಮದುವೆಗೆ ಬರುವ ಪುರುಷರು ಹಾಗೂ ಮಹಿಳೆಯರು ಬೇರೆ ಬೇರೆ ಹಾಲ್ ಗಳಲ್ಲಿ ಇರಬೇಕು ಎನ್ನುವ ಕಾನೂನುಗಳನ್ನು ತಾಲಿಬಾನ್ ತಂದಿದೆ ಎಂದು ವರದಿ ತಿಳಿಸಿದೆ.
 

Ads on article

Advertise in articles 1

advertising articles 2

Advertise under the article