Bangalore: ಮಗುವನ್ನು ಸ್ನಾನ ಮಾಡಿಸುತ್ತಿದ್ದಾಗ ಗ್ಯಾಸ್ ಗೀಸರ್(Gas geyser) ಸೋರಿಕೆಯಾಗಿ ತಾಯಿ, ಮಗು ದುರಂತ ಸಾವು !

Bangalore: ಮಗುವನ್ನು ಸ್ನಾನ ಮಾಡಿಸುತ್ತಿದ್ದಾಗ ಗ್ಯಾಸ್ ಗೀಸರ್(Gas geyser) ಸೋರಿಕೆಯಾಗಿ ತಾಯಿ, ಮಗು ದುರಂತ ಸಾವು !

ಬೆಂಗಳೂರು: ಮಗುವನ್ನು ಸ್ನಾನ ಮಾಡಿಸುತ್ತಿದ್ದ ವೇಳೆ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ ತಾಯಿ- ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ನಡೆದಿದೆ.ಮಂಗಳಾ(35) ಹಾಗೂ ಅವರ ಮಗು ಗೌತಮಿ (7) ಮೃತರು.

ಮೂಲತಃ ರಾಮನಗರ ಜಿಲ್ಲೆಯ ನಿವಾಸಿಯಾಗಿರುವ ಮಂಗಳಾ, ಪತಿ ನರಸಿಂಹಮೂರ್ತಿ ಬೆಂಗಳೂರಿನಲ್ಲಿ ಚಿಕ್ಕ ಬಾಣಾವರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪತಿ ನರಸಿಂಹಮೂರ್ತಿ  ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ತಾಯಿ, ಮಗಳು ಸಾವನ್ನಪ್ಪಿದ್ದು ಯಾರಿಗೂ ತಿಳಿಯಲೇ ಇಲ್ಲ.ಸಂಜೆಯಾದರೂ ಮಂಗಳಾ ಮನೆಯಿಂದ ಹೊರಗೆ ಬಂದಿರಲಿಲ್ಲ. ಹೀಗಾಗಿ ಮನೆ ಮಾಲೀಕರ ಪತ್ನಿ ಮನೆ ಒಳಗೆ ತೆರಳಿ ನೋಡಿದಾಗ ಸ್ನಾನದ ಕೊಠಡಿಯಲ್ಲಿ ತಾಯಿ, ಮಗು ಬಿದ್ದಿದ್ದರು.

ಗ್ಯಾಸ್ ಗೀಸರ್ ಆನ್ ಮಾಡಿ ತಾಯಿ, ತನ್ನ ಮಗಳನ್ನು ಬಿಸಿ ನೀರಿನಿಂದ ಸ್ನಾನ ಮಾಡಿಸುತ್ತಿದ್ದ ಸಂದರ್ಭದಲ್ಲಿ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೆಡ್ ಸೋರಿಕೆಯಾಗಿದ್ದು ಉಸಿರು ಕಟ್ಟಿ ಸ್ನಾನದ ಕೊಠಡಿಯಲ್ಲೇ ತಾಯಿ- ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದು ಅಲ್ಲಿಯೇ ಸಾವು ಕಂಡಿದ್ದಾರೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article