ಮಂಗಳೂರು: ಹಿಂದೂ ವಿದ್ಯಾರ್ಥಿನಿ ಫೋಟೊ ಮುಸ್ಲಿಂ ಯುವಕನ ಫೋಟೊದೊಂದಿಗೆ ಎಡಿಟ್ ಮಾಡಿ ವೈರಲ್ (MBBS Student photo viral)
Sunday, January 16, 2022
ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ MBBS ವ್ಯಾಸಂಗ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಫೋಟೊವನ್ನು ಮುಸ್ಲಿಂ ಯುವಕನ ಫೋಟೊದೊಂದಿಗೆ ಎಡಿಟ್ ಮಾಡಿ ಅವರಿಬ್ಬರಿಗೆ ಸಂಬಂಧವಿದೆಯೆಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಬಗ್ಗೆ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿಯ ಫೋಟೊವನ್ನು ಆಕೆಯ ಇನ್ ಸ್ಟಾ ಗ್ರಾಂ ಪೇಜ್ ನಿಂದ ತೆಗೆದು ಬಳಿಕ 'ಮುಲ್ಲಾ ರಹಿಮಾನ್ ಜೊತೆಗೆ ಕುಚಿಕು ಇದೆ' ಎಂದು ಬರೆದು ಮುಸ್ಲಿಂ ಯುವಕನ ಫೋಟೊ ಜೊತೆಗಿಟ್ಟು ಎಡಿಟ್ ಮಾಡಲಾಗಿತ್ತು. ಈ ಫೋಟೊವನ್ನು ಇನ್ಸ್ಟಾಗ್ರಾಂನ ಹಲವಾರು ಪೇಜ್ ಗಳಲ್ಲಿ ವೈರಲ್ ಮಾಡಲಾಗಿದೆ.
'ಮುಸ್ಲಿಂ ಯುವಕನೊಂದಿಗೆ ಹಿಂದೂ ವಿದ್ಯಾರ್ಥಿನಿಯ ಕುಚಿಕು' ಎಂಬ ವಿಚಾರ ಹಿಂದೂ ಸಂಘಟನೆಗಳ ಗಮನಕ್ಕೂ ಬಂದಿದೆ. ಬಳಿಕ ಈ ಬಗ್ಗೆ ವಿಚಾರ ನಡೆಸಿದಾಗ, ಫೋಟೊಗೂ ಆಕೆಗೂ ಯಾವುದೇ ಸಂಬಂಧವಿಲ್ಲ ಎನ್ನುವುದು ಕುಟುಂಬಸ್ಥರಿಗೂ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಪೋಷಕರು ಘಟನೆ ಬಗ್ಗೆ ತನಿಖೆ ನಡೆಸುವಂತೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.