ಕರಾವಳಿಯ ಹಲವು ವರ್ಷಗಳ ಹೋರಾಟಕ್ಕೆ ಜಯ: ಕರಾವಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಸಿಗಲಿವೆ ಕುಚ್ಚಲಕ್ಕಿ (Boiled Rice)
Wednesday, January 12, 2022
ಮಂಗಳೂರು: ಕುಚ್ಚಲಕ್ಕಿಯ ಊಟ ಮಾಡಿದ್ರೆನೇ ಕರಾವಳಿಗರಿಗೆ ಸಂತೃಪ್ತಿ.ಊರು ಬಿಟ್ಟು ಗ್ ಹೋದ್ರೂ ಬಾಯಿಲ್ಡ್ ರೈಸ್ ಹೋಟೆಲ್ ಎಲ್ಲಿದೆ ಅಂತ ಹುಡುಕ್ತಾರೆ.ಹೇಗಿದ್ರೂ ಇಲ್ಲಿನ ಪಡಿತರ ಕೇಂದ್ರದಲ್ಲಿ ಮಾತ್ರ ಕುಚಲಕ್ಕಿ ಸಿಗ್ತಾ ಇರ್ಲಿಲ್ಲ ಆದ್ರೀಗ ಕರಾವಳಿಗರ ಹತ್ತು ವರ್ಷದ ಹೋರಾಟಕ್ಕೆ ಜಯಸಿಕ್ಕಿದೆ. ಕುಚಲಕ್ಕಿ ನೀಡಿ ಎಂದು ಸರ್ಕಾರ ಹೇಳಿದ್ದು ಕರಾವಳಿಗರು ಸಂತಸಗೊಂಡಿದ್ದಾರೆ.
ಪ್ರದೇಶದಿಂದ ಪ್ರದೇಶಕ್ಕೆ ಭಾಷೆ ಸಂಸ್ಕೃತಿ ಹವಾಮಾನದಲ್ಲಿ ವ್ಯತ್ಯಾಸ ಇರುವಂತೆ ಆಹಾರ ಪದ್ಧತಿಯಲ್ಲೂ ವ್ಯತ್ಯಾಸವಿರುತ್ತೆ. ಅದರಂತೆ ಕರಾವಳಿಗರು ಕುಚ್ಚಲಕ್ಕಿ ಊಟವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಇಲ್ಲಿತನಕ ನ್ಯಾಯಬೆಲೆ ಅಂಗಡಿಗಳಲ್ಲಿ ಕುಚಲಕ್ಕಿ ಸಿಕ್ತಾ ಇರ್ಲಿಲ್ಲ. ಹೀಗಾಗಿ ಕರಾವಳಿಗರು ನ್ಯಾಯಬೆಲೆ ಅಂಗಡಿಯಲ್ಲಿ ಕುಚ್ಚಲಕ್ಕಿ ನೀಡಿ ಅಂತ ಸುಮಾರು ಹತ್ತು ವರ್ಷಗಳಿಂದ ಸರಕಾರಕ್ಕೆ ಬೇಡಿಕೆ ಸಲ್ಲಿಕೆ ಮಾಡಿದ್ದರ ಫಲವಾಗಿ ಸದ್ಯ ಕೇಂದ್ರ ಸರಕಾರ ನ್ಯಾಯಬೆಲೆ ಅಂಗಡಿಯಲ್ಲಿ ಕುಚ್ಚಲಕ್ಕಿ ನೀಡುವ ತೀರ್ಮಾನಕ್ಕೆ ಒಪ್ಪಿಗೆ ನೀಡಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಪಡಿತರ ಮೂಲಕ ವಿತರಣೆ ಮಾಡಲು 1ಲಕ್ಷ ಕ್ವಿಂಟಾಲ್ ಕುಚ್ಚಲಕ್ಕಿ ಅಕ್ಕಿ ಬಿಡುಗಡೆಯಾಗಲಿದೆ. M4 ಜಯಾ ತಳಿಯ ಅಕ್ಕಿಯನ್ನು ಖರೀದಿ ಮಾಡಿ ವಿನಿಯೋಗಿಸುತ್ತೇವೆ, ಎಂದು ಸಚಿವರು ಭರವಸೆ ನೀಡಿದ್ದಾರೆ. ಸದ್ಯ ಸರ್ಕಾರದ ಈ ತೀರ್ಮಾನದಿಂದ ಕರಾವಳಿಯ ಜನ ಸಂತಸಗೊಂಡಿದ್ದಾರೆ. ಇದರಿಂದ ಕರಾವಳಿಯಲ್ಲಿ ಭತ್ತದ ಕೃಷಿಗೆ ಉತ್ತೇಜನ ಸಿಕ್ಕಂತಾಗಿದೆ.
ಒಟ್ಟಿನಲ್ಲಿ ಕರಾವಳಿಯ ದಶಕಗಳ ಬೇಡಿಕೆ ಈಡೇರಿದೆ.ಅಂಗಡಿಯಿಂದ ಹೆಚ್ಚು ಬೆಲೆ ಕೊಟ್ಟು ಕುಚ್ಚಲಕ್ಕಿ ಖರೀದಿ ಮಾಡಲಾಗದ ಬಡವರು ಈ ಮೂಲಕವಾದ್ರೂ ತಮ್ಮಿಷ್ಟದ ಕುಚ್ಚಲಕ್ಕಿ ಊಟ ಮಾಡುವಂತಾಗಲಿ.