ಮಂಗಳೂರು: ಅಜ್ಞಾತ ಸ್ಥಳದಿಂದ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ ಕೊರಗಜ್ಜನ ವೇಷ ಧರಿಸಿದ್ದ ಮದುಮಗ
Saturday, January 8, 2022
ಮಂಗಳೂರು: ತುಳುವರ ಆರಾಧ್ಯ ದೈವ ಕೊರಗಜ್ಜನ ವೇಷವನ್ನು ಹಾಕಿ ಹಾಡು, ಕುಣಿತ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಯನ್ನು ಘಾಸಿಗೊಳಿಸಿರುವ ಮದುಮಗನೇ ಇದೀಗ ವೀಡಿಯೋ ಮಾಡಿ ಕ್ಷಮೆಯಾಚನೆ ಮಾಡಿಕೊಂಡಿದ್ದಾನೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದ ಬಾಷಿತ್ ಎಂಬ ಈ ಮದುಮಗ ವಿಟ್ಲದ ಸಾಲೆತ್ತೂರಿನ ವಧುವಿನೊಂದಿಗೆ ವಿವಾಹವಾಗಿದ್ದ. ಅದೇ ದಿನ ನಡು ರಾತ್ರಿ ಸಾಲೆತ್ತೂರಿನ ಮನೆಗೆ ವಧುವಿನ ಮನೆಗೆ ಬರುವ ಸಂದರ್ಭ ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿಕೊಂಡು ಗೆಳೆಯರೊಂದಿಗೆ ಹಾಡು ಹಾಡುತ್ತಾ, ಕುಣಿದಾಡುತ್ತಾ ಬಂದಿದ್ದ. ಆ ಬಳಿಕ ಇದರ ವೀಡಿಯೋ ವೈರಲ್ ಆಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಈ ಬಗ್ಗೆ ಬಾಷಿತ್ ಕ್ಷಮೆ ಯಾಚನೆ ಮಾಡಿದ್ದಾನೆ.
ಬಾಷಿತ್ ಮಲಯಾಳಂ ಭಾಷೆಯಲ್ಲಿ ಕ್ಷಮೆ ಯಾಚನೆ ಮಾಡಿ 'ಈ ಮೂಲಕ ನಾವು ಯಾವುದೇ ಸಮುದಾಯವನ್ನು ಅವಮಾನ ಮಾಡುವ ಉದ್ದೇಶದಿಂದ ಇದನ್ನು ಮಾಡಿಲ್ಲ. ನಮಗೆ ಎಲ್ಲಾ ಜಾತಿಗಳ ಬಗ್ಗೆ ಗೌರವ ಹಾಗೂ ವಿಶ್ವಾಸವಿದ್ದು ಯಾರಿಗಾದರೂ ಈ ಬಗ್ಗೆ ನೋವಾದಲ್ಲಿ ಕ್ಷಮೆ ಯಾಚಿಸುತ್ತೇನೆ' ಎಂದು ಹೇಳಿದ್ದಾನೆ.