ಕೊರೋನಾ ಟೈಮ್ ನಲ್ಲಿ ದಾಖಲೆ ಬರೆದ ಡೋಲೋ(Dolo 650)ಮಾತ್ರೆ-ಭಾರತದ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಮಾರಾಟ (Sale)!
Monday, January 17, 2022
ಎರಡು ಸಾವಿರದ ಇಪ್ಪತ್ತು ಮಾರ್ಚ್ ನಿಂದ ಪ್ರಪಂಚದಾದ್ಯಂತ ಕರೋನಾ ಕರಿ ಛಾಯೆ ಆವರಿಸಿದ್ದು ಹಳೆಯ ಸುದ್ದಿ. 2022 ಬಂದ್ರು ಇದರ ಕರಿನೆರಳು ಇನ್ನೂ ಕೂಡ ಮಾಸಿಲ್ಲ, ಎಷ್ಟೋ ಜನ ಈ ಸಮಯದಲ್ಲಿ ಕೆಲಸ ಕಳ್ಕೊಂಡಿದ್ದು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಊಟದ ವಿಚಾರದಲ್ಲಿ compromise ಆದ ಜನರು ಮಾತ್ರೆ ವಿಷಯದಲ್ಲಿ ಮಾತ್ರ compromise ಆಗ್ಲಿಲ್ಲ.
ಹೌದು ಪ್ರತಿ ಮನೆಯಲ್ಲಿಯೂ ಕರೋನಾ ಟೈಮ್ ನಲ್ಲಿ ಜಾಗ ಗಿಟ್ಟಿಸಿಕೊಂಡ ಮಾತ್ರೆ ಅಂದ್ರೆ Dolo 650. ಯಾರಿಗೆ ಜ್ವರ ಬರ್ಲಿ ತಲೆ ನೋವು ಬರ್ಲಿ ಮೊದ್ಲು ತಗೊಳ್ತಾ ಇದ್ದಿದ್ದು ಮೆಡಿಕಲ್ ಶಾಪ್ ನಲ್ಲಿ ಡಿಮಾಂಡ್ ಹೆಚ್ಚಿಸಿಕೊಂಡಿದ್ದು Dolo 650. ಕರೋನಾ ಟೈಮ್ ನಲ್ಲಿ ಡೋಲೋ ಟ್ಯಾಬ್ಲೆಟ್ ದಾಖಲೆಯ ಮಾರಾಟವಾಗಿದೆ ಅಂದ್ರೆ ನಂಬಲೇಬೇಕು. ಐಕ್ಯೂಬಿಐ ಈ ಸಂಸ್ಥೆಯ ಸಂಶೋಧನೆಯ ಪ್ರಕಾರ 2020-21ರಲ್ಲೇ Dolo 650 ಮಾತ್ರೆಗಳು 358 ಕೋಟಿ ಮಾರಾಟವಾಗಿದ್ಯಂತೆ.
ಡೋಲೋ ಸಂಸ್ಥೆ ಎರಡು ಸಾವಿರದ ಇಪ್ಪತ್ತೊಂದರಲ್ಲಿ 308ಕೋಟಿ ವಹಿವಾಟು ನಡೆಸುವ ಮೂಲಕ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಎರಡನೇ ಜ್ವರ ಮತ್ತು ನೋವಿನ ಮಾತ್ರೆ ಅನ್ನೋ ಖ್ಯಾತಿ ಗಳಿಸಿದೆ. ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚಾದ ಕೀವರ್ಡ್ ನ ಪದವೂ ಕೂಡ Dolo 650ಯಾಗಿದೆ. ಇದನ್ನು ಹೊರತುಪಡಿಸಿ Calpol ಮಾತ್ರೆ 310 ಕೋಟಿ ವಹಿವಾಟಿನ ಮೂಲಕ ಒಂದು ಹಂತ ಮೇಲಿದ್ದು ಭಾರತೀಯರ ಪಾಲಿಗೆ ಡೋಲೋ ಟ್ಯಾಬ್ಲೆಟ್ ವರವಾಗಿದೆ.ಭಾರತೀಯ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಮಾರಾಟವಾಗಿರೊದು ನಂಬಲೇ ಬೇಕಾದ ವಿಚಾರವೇ ಸರಿ.