ಇನ್ಸ್ಟಾಗ್ರಾಂ (Instagram) ನಲ್ಲಿ ಮೂವತ್ತು ಕೋಟಿ ಫಾಲೋವರ್ಸ್ ಪಡೆದು ದಾಖಲೆ ನಿರ್ಮಿಸಿದ ವಿಶ್ವದ ಮೊದಲ ಮಹಿಳೆ
Tuesday, January 18, 2022
ಅಮೇರಿಕದ ಬೋರ್ಡೆನ್ ಮಹಿಳಾ ಉದ್ಯಮಿ ಕೈಲೀ ಜೆನ್ನರ್ ಇನ್ಸ್ಟಾಗ್ರಾಂ ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಕೈಲೀ ಜೆನ್ನರ್ ಇನ್ಸ್ಟಾಗ್ರಾಂನಲ್ಲಿ ಮೂವತ್ತು ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಇನ್ಸ್ಟಾಗ್ರಾಂ ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ತಮ್ಮ ಹೊಸ ದಾಖಲೆಯ ಮೂಲಕ ಫೇಮಸ್ ಪಾಪ್ ಸಿಂಗರ್ ಅರಿಯಾನ ಗ್ರಾಂಡೆ ಅವರನ್ನು ಹಿಂದಿಕ್ಕಿದ್ದಾರೆ.
24 ವರ್ಷ ವಯಸ್ಸಿನ ಕೈಲಿ ಜೆನ್ನರ್ ಹೆಚ್ಚು ಫಾಲೋವರ್ಸ್ ಹೊಂದುವುದರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 388 ಕೋಟಿ ಫಾಲೋವರ್ಸ್ ಹೊಂದಿರುವ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ.
ಕೈಲಿ ಜೆನ್ನರ್ ಕೆಲವು ತಿಂಗಳಿನಿಂದ ಇನ್ಸ್ಟಾಗ್ರಾಂನಲ್ಲಿ ಕಡಿಮೆ profile ಹೊಂದಿದ್ರೂ ಮೂವತ್ತು ಕೋಟಿ ಫಾಲೋವರ್ಸ್ ಹೊಂದುವುದ್ರಲ್ಲಿ ಯಶಸ್ವಿಯಾಗಿದ್ದಾರೆ.ರಾಪರ್ ಟ್ರಾವಿಸ್ ಸ್ಕಾಟ್ ಅವರನ್ನು ವಿವಾಹವಾಗಿರುವ ಕೈಲಿ ಜೆನ್ನರ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ರಿಯಾಲಿಟಿ ಶೋ ತಾಯಿಯಾಗಿರುವ ಇವರು ನವೆಂಬರ್ ನಲ್ಲಿ ಆಸ್ಟ್ರೋ ವರ್ಲ್ಡ್ ದುರಂತದ ನಂತರ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ರು. ಆಸ್ಟ್ರೋ ವರ್ಲ್ಡ್ ಸಮಾರಂಭದಲ್ಲಿ ಈಕೆಯ ಪತಿ ಪ್ರದರ್ಶನ ನೀಡುತ್ತಿದ್ದಾಗ ಪ್ರೇಕ್ಷಕರ ಗುಂಪಿನಲ್ಲಿ ನೂಕು ನುಗ್ಗಲುಂಟಾಯಿತು. ಇದ್ರಿಂದ ಹತ್ತು ಮಂದಿ ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದರು. ಇದಾದ ಬಳಿಕ ಜೆನ್ನರ್ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರು. 2021 ರಲ್ಲಿ ಕ್ರಿಸ್ಮಸ್ ನಲ್ಲಿ ತನ್ನ ತಾಯಿ ಕ್ರಿಸ್ ಜೆನ್ನರ್ ಅವ್ರ ಫೋಟೋ ಪೋಸ್ಟ್ ಮಾಡಿದ್ದರು.ಇದಾದ ಬಳಿಕ ತಾವು ಗರ್ಭಿಣಿಯಾಗಿರುವ ಬಗ್ಗೆ ಫೋಟೋಗಳನ್ನ ಹಂಚಿಕೊಂಡಿದ್ರು.