ವರನಿಗೆ ಕೊರಗಜ್ಜ ದೈವದ ವೇಷ ಹಾಕಿ ಧಾರ್ಮಿಕ ಭಾವನೆಗೆ ಘಾಸಿಗೊಳಿಸಿದ ಪ್ರಕರಣ: ಒಂದು ತಿಂಗಳೊಳಗೆ ಅವರನ್ನೂ ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ ಎಂದ ಕೊರಗಜ್ಜ

ವರನಿಗೆ ಕೊರಗಜ್ಜ ದೈವದ ವೇಷ ಹಾಕಿ ಧಾರ್ಮಿಕ ಭಾವನೆಗೆ ಘಾಸಿಗೊಳಿಸಿದ ಪ್ರಕರಣ: ಒಂದು ತಿಂಗಳೊಳಗೆ ಅವರನ್ನೂ ಹುಚ್ಚರಂತೆ ಬೀದಿ ಮೆರವಣಿಗೆ ಮಾಡಿಸುವೆ ಎಂದ ಕೊರಗಜ್ಜ


ಮಂಗಳೂರು: ಮದುವೆ ಸಂಭ್ರಮಾಚರಣೆ ಸಂಧರ್ಭದಲ್ಲಿ ವರನಿಗೆ
ತುಳುನಾಡಿನ ಆರಾಧ್ಯದೈವ ಕೊರಗಜ್ಜನಂತೆ ಕಾಣುವ ವೇಷ ಹಾಕಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಗೊಳಿಸಿ ಅವಮಾನ ಮಾಡಿರುವ ಬಗ್ಗೆ ಕೊರಗಜ್ಜ ದೈವದ ಬಳಿಯೇ ದೂರು ನೀಡಿರುವ ಘಟನೆಯೊಂದು ಮಂಗಳೂರಿನ ಅತ್ತಾವರದ ಬಳಿ ನಡೆದಿದೆ.




ವಿಟ್ಲದ ಸಾಲೆತ್ತೂರಿನ ಮದುವೆಯ ಸಂಭ್ರಮಾಚರಣೆ ನೆಪದಲ್ಲಿ ಮುಸ್ಲಿಂ ಯುವಕರು ಮದುಮಗಳ ಮನೆಗೆ ರಾತ್ರಿ ಬರುವ ವೇಳೆ ವರನಿಗೆ ಕೊರಗಜ್ಜನ ವೇಷ ಹಾಕಿಸಿ ಹಾಡು, ನೃತ್ಯ ಮಾಡುತ್ತಾ ಬಂದಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿನ್ನೆ ಹಿಂದೂ ಧರ್ಮೀಯರಿಂದ ಭಾರೀ ಆಕ್ರೋಶ ಕೇಳಿ ಬಂದಿತ್ತು.ಅಲ್ಲದೆ ಮುಸ್ಲಿಂ ಮುಖಂಡರೂ ಈ ಕೃತ್ಯವನ್ನು ಖಂಡಿಸಿ ಅರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. 

ಅಲ್ಲದೆ ದುಷ್ಕರ್ಮಿಗಳ ಕೃತ್ಯದಿಂದ ಬೇಸರಗೊಂಡು ಭಕ್ತರು ಮೇಲಿನಮೊಗರು ಅತ್ತಾವರ ಪರಿಸರದಲ್ಲಿ ಕೊರಗಜ್ಜನ ಕಟ್ಟೆಯಲ್ಲಿ ನಿನ್ನೆ ರಾತ್ರಿ ನಡೆದಿರುವ ಕೋಲದ ಸಂದರ್ಭ ಕೊರಗಜ್ಜ ದೈವದೊಂದಿಗೆ ಈ ಬಗ್ಗೆ ದೂರು ನೀಡಿ ತಪ್ಪಿತಸ್ಥರಿಗೆ ಶಾಸ್ತಿ ಮಾಡಬೇಕೆಂದು ಭಿನ್ನವಿಸಿಕೊಂಡಿದ್ದರು. 

ನಂತರ ದೈವವು ನುಡಿ ನೀಡಿ ''ನನ್ನನ್ನು ಯಾವ ರೀತಿ ಹುಚ್ಚನಂತೆ ಚಿತ್ರಿಸಿ ಆಡಿಸಿದ್ದಾರೋ, ಒಂದು ತಿಂಗಳೊಳಗೆ ಕಳೆಯುವುದರೋಳಗೆ ಅವರನ್ನೂ ಅದೇ ರೀತಿ ಹುಚ್ಚರಂತೆ ಮಾಡಿ ಬೀದಿಯಲ್ಲಿ ತಿರುಗುವಂತೆ ಮಾಡುತ್ತೇನೆ ಎಂದು ಭಕ್ತರಿಗೆ ಅಭಯ ನೀಡಿದೆ.

Ads on article

Advertise in articles 1

advertising articles 2

Advertise under the article