PADUBIDRI: ನಶೆಯ ಅಮಲಿನಲ್ಲಿ ವಿದ್ಯಾರ್ಥಿಗಳಿಂದ ಬೀದಿ ರಂಪಾಟ: ಪೊಲೀಸರಿಗೆ ಆವಾಜ್
Friday, January 7, 2022
ಪಡುಬಿದ್ರೆ: ನಶೆಯ ಅಮಲಿನಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸಾರ್ವಜನಿಕ ಪ್ರದೇಶದಲ್ಲಿ ಬೀದಿ ರಂಪಾಟ ನಡೆಸಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಈ ಬೀದಿ ರಂಪಾಟದಿಂದ ಜನರಿಗೆ ಪುಕ್ಕಟ್ಟೆ ಮನರಂಜನೆ ದೊರಕಿದಂತಾಗಿದೆ.
ಉಡುಪಿ ಜಿಲ್ಲೆಯ ಪಡುಬಿದ್ರೆ ಪೇಟೆಯಲ್ಲಿ ಮೂವರು ವಿದ್ಯಾರ್ಥಿಗಳು ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಪಡುಬಿದ್ರೆಯ ಬೀಡು ಬಳಿ ಪೆಟ್ರೋಲ್ ಖಾಲಿಯಾಗಿ ಸ್ಕೂಟರ್ ನಿಂತ ಸಂದರ್ಭ ಯುವತಿ ಹಾಗೂ ಯುವಕರ ಮಧ್ಯೆ ವಾಗ್ವಾದ ನಡೆದಿದೆ. ಮಾತಿ ಮಾತು ಬೆಳೆದು, ಬೀದಿ ಕಾಳಗವೇ ನಡೆದಿದೆ. ಈ ಸಂದರ್ಭ ಬೀದಿ ರಂಪಾಟದ ಪುಕ್ಕಟ್ಟೆ ಮನರಂಜನೆಗಾಗಿ ಸುತ್ತಲೂ ಜನ ಜಮಾಯಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪಡುಬಿದ್ರೆ ಪೊಲೀಸರು ಬೀದಿ ರಂಪಾಟ ಮಾಡುತ್ತಿದ್ದವರನ್ನು ಸಮಾಧಾನ ಮಾಡಲೆತ್ನಿಸಿದ್ದಾರೆ. ಆಗ ಅವರು ಪೊಲೀಸರಿಗೇ ಆವಾಜ್ ಹಾಕಿ "ನಮ್ಮ ಮೈ ಮುಟ್ಟಬೇಡಿ, ನಾವು ಯಾರು, ನಮ್ಮ ತಂದೆ ಯಾರು ಎಂಬುದನ್ನು ನಿಮಗೆ ನಾಳೆ ತಿಳಿಸುತ್ತೇವೆ. ನಾವು ಎಂಬಿಬಿಎಸ್ ವಿದ್ಯಾರ್ಥಿಗಳು" ಎಂದು ಸಾರ್ವಜನಿಕವಾಗಿಯೇ ಕಿರಾಚಾಡಿ ರಂಪಾಟ ಮಾಡಿದ್ದಾರೆ. ಇಂಗ್ಲೀಷ್, ಹಿಂದಿ ಹಾಗೂ ತಮಿಳು ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತಿದ್ದ ಇವರು ಮಣಿಪಾಲದ ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ.