ಮಂಗಳೂರಿನ ಬಾಲೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ..ಪ್ರದಾನಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ರೆಮೋನಾ ಪಿರೇರಾ...

ಮಂಗಳೂರಿನ ಬಾಲೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ..ಪ್ರದಾನಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ ರೆಮೋನಾ ಪಿರೇರಾ...

ಮಂಗಳೂರು:ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿ ವಿಜೇತ ರಾಜ್ಯದ ಏಕೈಕ ಬಾಲಕಿ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೋನಾ ಪರೇರಾ
ಅವರಿಗೆ ಜ.24ರ ಸೋಮವಾರ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ನವದೆಹಲಿಯಿಂದ ಡಿಜಿಟಲ್ ಮಾದ್ಯಮದ ಮೂಲಕ ಪ್ರಶಸ್ತಿ ಪ್ರದಾನ ಮಾಡಿದರು.ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಒಳಗೊಂಡಿರುತ್ತದೆ. 




ವಿಡಿಯೋ ಕಾನ್ಪರೆನ್ಸ್‌ನಲ್ಲಿ ಪ್ರಧಾನಿ ಅವರೊಂದಿಗೆ ರೆಮೋನಾ ಇವೆಟ್ ಪಿರೇರಾ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರ ತಾಯಿ ಗ್ಲಾಡಿಸ್ ಪಿರೇರಾ ಜತೆಗಿದ್ದರು. 'ಮೂರನೇ ವರ್ಷದಿಂದಲೇ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ, ಹೇಗೆ ಅಭ್ಯಾಸ ಮಾಡಿದ್ದೀರಿ? ನೀವೇ ಸ್ವಯಂ ಆಗಿ ಅಭ್ಯಾಸ ಮಾಡುತ್ತಿದ್ದೀರಾ ಅಥವಾ ಪೋಷಕರು ಕಾಳಜಿ ವಹಿಸಿದ್ದರೇ ಎಂಬ ಪ್ರಧಾನಿ ಮೋದಿ ಪ್ರಶ್ನೆಗೆ 'ನನ್ನ ತಾಯಿಯವರಿಗೆ ಭಾರತೀಯ ಸಂಸ್ಕೃತಿ ಬಗ್ಗೆ ಆಸಕ್ತಿ. ಹಾಗಾಗಿ ನಾನು ಇದರಲ್ಲಿ ಆಸಕ್ತಿ ಬೆಳೆಸಿಕೊಂಡೆ' ಎಂದು  ರೆಮೋನಾ ಉತ್ತರಿಸಿದರು. ಬಾಲ್ಯದಿಂದಲೇ ಏನಾದರೂ ಕಷ್ಟಕರ ಪರಿಸ್ಥಿತಿ ಎದುರಾಗಿತ್ತೇ' ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ರೆಮೋನಾ, 'ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡೆ, ಹಾಗಾಗಿ ತಾಯಿ ಬಹಳ ಕಷ್ಟದಲ್ಲೇ ನನ್ನನ್ನು ಓದಿಸಿದರು, ನೃತ್ಯ ತರಬೇತಿಗೆ ಸೇರಿಸಿದರು' ಎಂದರು.

13 ವರ್ಷಗಳಿಂದ ಭರತನಾಟ್ಯ ಕಲಾವಿದೆ ಆಗಿರುವ ರೆಮೋನಾ ಇವೆಟ್ ಪಿರೇರಾ, ಒಡೆದ ಗಾಜಿನ ಮೇಲೆ ನೃತ್ಯ, ಮಡಕೆ ಮೇಲೆ ಸಮತೋಲನದ ನಾಟ್ಯ, ಕೋಲಿನ ಮೇಲೆ ನೃತ್ಯ ಇತ್ಯಾದಿ ಆವಿಷ್ಕಾರಿ ನೃತ್ಯಗಳನ್ನೂ ಮಾಡಿದವರು.ದೇಶದ 16 ರಾಜ್ಯಗಳಲ್ಲಿ ಪ್ರದರ್ಶನ ನೀಡಿ 20 ಪ್ರಶಸ್ತಿ ಪಡೆದುಕೊಂಡಿದ್ದಾರೆ. ಡಾ.ಶ್ರೀವಿದ್ಯಾ ಮುರಳೀಧರ್ ಅವರ ಶಿಷ್ಯೆಯಾಗಿರುವ ಪಿರೇರಾ ಒಡಿಸ್ಸಿ, ಮೋಹಿನಿಯಾಟ್ಟಂ ಅಲ್ಲದೆ ಯಕ್ಷಗಾನದಲ್ಲೂ ತರಬೇತಿ ಪಡೆಯುತ್ತಿರುವುದು ಮಾತ್ರವಲ್ಲದೆ ಗೌತಮ ಭಟ್ಟಾಚಾರ್ಯರಿಂದ ಪಾಶ್ಚಿಮಾತ್ಯ ನೃತ್ಯವನ್ನೂ ಅಭ್ಯಾಸ ಮಾಡುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article