ಸಾಲದ ಸುಳಿಗೆ ಸಿಲುಕಿ ದಿವಾಳಿ ಹಂತಕ್ಕೆ ತಲುಪಿದ ದ್ವೀಪರಾಷ್ಟ್ರ...ಶ್ರೀಲಂಕಾದಿನ ಬಳಕೆ ವಸ್ತುಗಳ ಪೂರೈಕೆಗೆ ಪರದಾಡುತ್ತಿರುವ ರಾವಣ ರಾಜ್ಯ...ದುಸ್ಥಿತಿಗೆ ತಲುಪಿದ ಲಂಕಾಗೆ ಭಾರತದ ನೆರವಿನ ಹಸ್ತSrilanka Spacial report
Saturday, January 22, 2022
ಸಾಲದ ಸುಳಿಗೆ ಸಿಲುಕಿದ ದ್ವೀಪರಾಷ್ಟ್ರ ದಿವಾಳಿ ಹಂತಕ್ಕೆ ತಲುಪಿದೆ. ತನ್ನ ನಾಗರಿಕರಿಗೆ ತೈಲ,ಅಡುಗೆ ಅನಿಲ, ಹಾಲು ಇತ್ಯಾದಿ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಆಗದಂತಹ ಸ್ಥಿತಿ ಬಂದುಬಿಟ್ಟಿದೆ. ತುರ್ತು ಸಂದರ್ಭಕ್ಕೆ ಮೀಸಲಿಟ್ಟಿದ್ದ ಚಿನ್ನದ ಮೀಸಲು ಕೂಡ ಮಾರಾಟ ಮಾಡಿದೆ.
ಸಾಲದಿಂದ ದಿವಾಳಿ ಹಂತಕ್ಕೆ ತಲುಪಿದ ಶ್ರೀಲಂಕಾ, ಜನರಿಗೆ ಗ್ಯಾಸ್ ಹಾಲು ಮೆಡಿಸಿನ್ ಪೂರೈಕೆಗೂ ಪರದಾಟ...
ಅತಿಯಾದ ಸಾಲ,ಹಣದುಬ್ಬರದಿಂದಾಗಿ ದ್ವೀಪರಾಷ್ಟ್ರ ಶ್ರೀಲಂಕಾ ದಿವಾಳಿಯ ಹಂತಕ್ಕೆ ತಲುಪಿದೆ. ವಿದೇಶಿ ವಿನಿಮಯ ಸಂಗ್ರಹ ಸಂಪೂರ್ಣ ಕುಸಿದಿರುವ ಕಾರಣ ಡಾಲರ್ ಕೊರತೆಯಿಂದಾಗಿ ತನ್ನ ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗದ ಸ್ಥಿತಿಗೆ ತಲುಪಿದೆ . ಅಡುಗೆ ಅನಿಲ, ಸೀಮೆಎಣ್ಣೆ ,ಪೆಟ್ರೋಲ್, ಡೀಸೆಲ್, ಹಾಲು, ಮೆಡಿಸಿನ್ ಗಳ ಪೂರೈಕೆಗೂ ಪರದಾಡುವಂತಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನ ದಿಕ್ಕೆಟ್ಟು ಕೂತಿದ್ದಾರೆ.ಈಗಾಗಲೇ ತರಕಾರಿ ದಿನಸಿ ವಸ್ತುಗಳು ಸೇರಿ ಅನೇಕ ದಿನಬಳಕೆ ವಸ್ತುಗಳ ಬೆಲೆ ದುಬಾರಿಯಾಗಿದೆ.
ಕೆಜಿ ಲೆಕ್ಕದಲ್ಲಿ ಖರೀದಿ ಮಾಡಿದ್ದ ಜನ ಗ್ರಾಮ್ ಲೆಕ್ಕದಲ್ಲಿ ಖರೀದಿ ಮಾಡುವಂತಾಗಿದೆ.ಇದೀಗ ಗ್ಯಾಸ್ ಹಾಲಿನ ಪೂರೈಕೆ ವ್ಯತ್ಯಯವಾಗಿದ್ದು ಜನರ ಸ್ಥಿತಿ ಅಯೋಮಯವಾಗಿದೆ.
ತುರ್ತು ಸಂದರ್ಭಕ್ಕೆ ಮೀಸಲಿಟ್ಟಿದ್ದ ಚಿನ್ನವೂ ಮಾರಾಟ.
ದೇಶಕ್ಕೆ ತುರ್ತು ಸಂದರ್ಭ ಎದುರಾದಾಗ ಬಳಸಿಕೊಳ್ಳೋದಕ್ಕೆ ಮೀಸಲಿಟ್ಟಿದ್ದ ಚಿನ್ನವನ್ನು ಶ್ರೀಲಂಕಾ ಸೇಲ್ ಮಾಡಿದೆ. ಸಂಪೂರ್ಣ ದಿವಾಳಿಯಾಗೋದನ್ನು ತಪ್ಪಿಸೋದಿಕ್ಕೆ ಕಟ್ಟಕಡೆಯ ಪ್ರಯತ್ನವಾಗಿ ತಾನು ಸಂಗ್ರಹಿಸಿಟ್ಟಿದ್ದ ಚಿನ್ನದ ಒಂದು ಭಾಗವನ್ನು ಮಾರಾಟ ಮಾಡಿದೆ. ಶ್ರೀ ಲಂಕಾದ ಕೇಂದ್ರ ಬ್ಯಾಂಕ್ ಗವರ್ನರ್ ನಿಮಾರ್ಡ್ ಕ್ಯಾಬ್ರಲ್ ಫಾರಿನ್ ಕರೆನ್ಸಿ ಹೆಚ್ಚಿಸುವಿಕೆಗೆ ಶ್ರೀಲಂಕಾ ತನ್ನ ಚಿನ್ನದ ನಿಕ್ಷೇಪಗಳ ಒಂದು ಭಾಗವನ್ನ ಮಾರಾಟ ಮಾಡಿದೆ ಎಂದು ತಿಳಿಸಿದ್ದಾರೆ. "ವಿದೇಶಿ ಮೀಸಲು ಕಡಿಮೆಯಾದಾಗ ನಾವು ಚಿನ್ನದ ಹೋಲ್ಡಿಂಗ್ ಕಡಿಮೆ ಮಾಡುತ್ತೇವೆ.ವಿದೇಶಿ ಮೀಸಲು ಹೆಚ್ಚಾದಾಗ ನಾವು ಚಿನ್ನವನ್ನು ಖರೀದಿ ಮಾಡ್ತೇವೆ. ಒಮ್ಮೆ ಮೀಸಲು ಮಟ್ಟವು ಯುಎಸ್ಬಿ ಫೈಲ್ ಶತಕೋಟಿಗಿಂತ ಹೆಚ್ಚಾದ್ರೆ ಕೇಂದ್ರ ಬ್ಯಾಂಕು ಚಿನ್ನದ ಹೋಲ್ಡಿಂಗ್ಸ್ ಹೆಚ್ಚಿಸುವುದನ್ನು ಪರಿಗಣಿಸುತ್ತದೆ" ಎಂದಿದ್ದಾರೆ.
ಎಕಾನಮಿ ಲಿಫ್ಟ್ ನ ವರದಿಯ ಪ್ರಕಾರ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ 2021 ಆರಂಭದ ವೇಳೆ 6.69 ಟನ್ ನಷ್ಟು ಚಿನ್ನದ ಮೀಸಲನ್ನ ತನ್ನಲ್ಲಿ ಹೊಂದಿತ್ತು. ದೇಶದ ಕಠಿಣ ಆರ್ಥಿಕ ಪರಿಸ್ಥಿತಿಯಿಂದಾಗಿ ಅಂದಾಜು 3.6ಟನ್ ಗಳಷ್ಟು ಚಿನ್ನವನ್ನು ಮಾರಾಟ ಮಾಡಿದೆ. ಪ್ರಸ್ತುತ ಶ್ರೀಲಂಕಾದಲ್ಲಿ 3 ಅಥವಾ 3.1ಟನ್ ನಷ್ಟು ಮಾತ್ರವೇ ಚಿನ್ನದ ಮೀಸಲಿದೆ ಅಂತ ಹೇಳಿದೆ.
7.3ಬಿಲಿಯನ್ ಡಾಲರ್ ವಿದೇಶಿ ಸಾಲ ಪಾವತಿಸಬೇಕಿದೆ
ಪ್ರವಾಸೋದ್ಯಮ ಕುಸಿತದಿಂದಲೂ ಭಾರೀ ಪೆಟ್ಟು
ಶ್ರೀಲಂಕಾ ಇಂತಹ ದುಃಸ್ಥಿತಿಗೆ ತಲುಪಲು ಮೂಲ ಕಾರಣ ತಾನು ಮಾಡಿರುವ ವಿದೇಶಿ ಸಾಲ. ರಾಜಪಕ್ಸೆ ನೇತೃತ್ವದ ಸರ್ಕಾರವು ಈ ವರ್ಷ 7.3 ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡಬೇಕಿದೆ. ಸಾಲ ತೀರಿಸದೇ ಇದ್ರೆ ತನ್ನ ಗೌರವಕ್ಕೆ ದಕ್ಕೆ ಆಗಲಿದೆ. ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕಷ್ಟವಾಗಲಿದೆ.ಇದು ಶ್ರೀ ಲಂಕಾವನ್ನ ಮತ್ತಷ್ಟು ಸಂದಿಗ್ಧ
ಸ್ಥಿತಿಗೆ ತಳ್ಳಿದೆ. ಶುಲ್ಕಕ್ಕಾಗಿ ಪ್ರವಾಸೋದ್ಯಮದಿಂದ ಹೆಚ್ಚು ಆದಾಯ ಬರುತ್ತಿತ್ತು.ಕೋವಿಡ್ ಕಾರಣ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿತಗೊಂಡ ಕಾರಣ ವಿದೇಶಿ ವಿನಿಮಯಕ್ಕೆ ಪೆಟ್ಟು ಬಿದ್ದಿದೆ.
ಭಾರತವು 2ಬಾರಿ ಚಿನ್ನವನ್ನು ಒತ್ತೆ ಇಟ್ಟಿತ್ತು.
1991 ರಲ್ಲಿ ಉದಾರೀಕರಣದ ಸಮಯದಲ್ಲಿ ಭಾರತದ ಆರ್ಥಿಕತೆಯು ಎಷ್ಟು ಕೆಟ್ಟ ಸ್ಥಿತಿಯಲ್ಲಿತ್ತು ಅಂದ್ರೆ ಚಿನ್ನವನ್ನ 2ಬಾರಿ ಒತ್ತೆ ಇಡಬೇಕಿತ್ತು. ಮೊಟ್ಟ ಮೊದಲ ಬಾರಿಗೆ ಚಿನ್ನವನ್ನು ಒತ್ತೆ ಇಡುವ ವಿಚಾರ ಬಂದಿದ್ದು ಯಶ್ವಂತ್ ಸಿನ್ಹ ಅವರು ಹಣಕಾಸು ಸಚಿವರಾಗಿದ್ದಾಗ ಮತ್ತು ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ.ಆ ಸಮಯದಲ್ಲಿ ಭಾರತದ ರೇಟಿಂಗನ್ನು ಅಂತರಾಷ್ಟ್ತ್ರೀಯ ಏಜೆನ್ಸಿಗಳು ಕೈಬಿಟ್ಟವು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತ ದಿವಾಳಿ ಆಗುವ ಅಪಾಯ ಇತ್ತು ಭಾರತದ ವಿದೇಶಿ ವಿನಿಮಯ ಖಾಲಿಯಾಗಿತ್ತು.ಆ ಕಷ್ಟದ ಸಮಯದಲ್ಲಿ ಕೊನೆಯದಾಗಿ ಚಿನ್ನವನ್ನು ಒತ್ತೆಯಿಡುವ ನಿರ್ಧಾರ ತೆಗೆದುಕೊಳ್ಳಲಾಯಿತು.ಭಾರತ ಅಂದು ಎದುರಿಸಿದ್ದ ಪರಿಸ್ಥಿತಿ ಯನ್ನೇ ಇಂದು ಶ್ರೀ ಲಂಕಾ ಎದುರಿಸುತ್ತಿದೆ ಎಂದು ಶ್ರೀ ಲಂಕಾ ಅರ್ಥಶಾಸ್ತ್ರಜ್ಞ ವಿಜಯವರ್ಧನೆ ಸಮರ್ಥನೆ ಮಾಡಿದ್ದಾರೆ.
ಭಾರತ ದಿಂದ ೫೦೦ ಮಿಲಿಯನ್ ಸಾಲದ ಭರವಸೆ. ಇನ್ನು ಸಂಕಷ್ಟದ ಲ್ಲಿರುವ ಶ್ರಿಲಂಕಾ ನೆರವಿಗೆ ಭಾರತ ಧಾವಿಸಿದೆ.ಪೆಟ್ರೋಲ್ ಡೀಸೆಲ್ ಖರೀದಿಗಾಗಿ ೫೦೦ ಮಿಲಿಯನ್ ಸಾಲದ ಭರವಸೆ ನೀಡಿದೆ.ಈ ಬಗ್ಗೆ ಶ್ರೀಲಂಕಾ ದಲ್ಲಿರುವ ಭಾರತ ರಾಯಭಾರಿ ಕಚೇರಿ ಮಾಹಿತಿ ನೀಡಿದೆ.ಒಟ್ಟಾರೆ ಶ್ರೀ ಲಂಕಾ ದಿವಾಳಿ ಹಂತ ತಲುಪಿದ್ದು ಅಲ್ಲಿನ ಜನತೆ ಆಳುವ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.