ಮಂಗಳೂರು:TV ನೋಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ-ಅರೋಪಿ ಯುವಕನ ಬಂಧನ
Thursday, January 6, 2022
ಮಂಗಳೂರು: ಟಿವಿ ನೋಡಲೆಂದು ತನ್ನ ಮನೆಗೆ ಬಂದ ಹತ್ತು ವರ್ಷದ ಬಾಲಕಿ ಜೊತೆಗೆ ಅಶ್ಲೀಲವಾಗಿ ನಡೆದುಕೊಂಡ ಅರೋಪಿ ಯುವಕ ನಿತಿನ್ ನನ್ನು (19) ಪೋಕ್ಟೋ ಕಾಯ್ದೆಯಡಿ ಉರ್ವಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.24 ರಂದು ಸಂಜೆ ಘಟನೆ ನಡೆದಿದ್ದು ನಾಲ್ಕನೇ ತರಗತಿಯಲ್ಲಿ ಕಲಿಯುವ ಮಗು ಶಾಲೆಯಿಂದ ಮನೆಗೆ ಬಂದ ಬಳಿಕ ಪಕ್ಕದ ಮನೆಗೆ ತೆರಳಿದ್ದಳು. ಟಿವಿ ನೋಡಲು ಹೋಗಿದ್ದ ವೇಳೆ ನಿತಿನ್ ಎಂಬ ತನ್ನ ಗುಪ್ತಾಂಗವನ್ನು ತೋರಿಸಿ, ಕೈಯಲ್ಲಿ ಹಿಡಿಯುವಂತೆ ಒತ್ತಾಯಿಸಿದ್ದಾನೆ. ಇದರಿಂದ ಹೆದರಿದ ಮಗು ಅಲ್ಲಿಂದ ಓಡಿ ತನ್ನ ಮನೆಗೆ ಬಂದು ಪೋಷಕರಲ್ಲಿ ವಿಷಯ ತಿಳಿಸಿದ್ದಾಳೆ.
ಆನಂತರ, ಆರೋಪಿ ನಿತಿನ್ ಬಾಲಕಿ ಮನೆಗೆ ಬಂದು ಈ ವಿಚಾರವನ್ನು ಯಾರಿಗಾದ್ರೂ ಹೇಳಿದರೆ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ.ಈ ಬಗ್ಗೆ ಉರ್ವ ಠಾಣೆಯಲ್ಲಿ ಬಾಲಕಿಯ ತಂದೆ ದೂರು ನೀಡಿದ್ದು ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿ ಲೈಂಗಿಕ ಕಿರುಕುಳ ಆರೋಪದಲ್ಲಿ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.