ಮಂಗಳೂರು: ನಿಯಂತ್ರಣ ಕಳೆದುಕೊಂಡು ಬೈಕ್ ಗೆ ಗುದ್ದಿದ ಕಾರು; ಭಯಾನಕ ದೃಶ್ಯ ಸಿಸಿಕ್ಯಾಮರಾದಲ್ಲಿ ದಾಖಲು(car accident cc tv)
Thursday, February 3, 2022
ಮಂಗಳೂರು: ನಿಯಂತ್ರಣ ಕಳೆದುಕೊಂಡು ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿರುವ ಘಟನೆಯೊಂದು ಉರ್ವದ ಚಿಲಿಂಬಿ ಮಠದಕಣಿ ಕ್ರಾಸ್ ರೋಡ್ ನಲ್ಲಿ ಸಂಭವಿಸಿದೆ. ಅಪಘಾತದ ಭಯಾನಕ ದೃಶ್ಯವು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಿವೇಕಾನಂದ ಶೆಣೈ (63) ಎಂಬವರು ಚಲಾಯಿಸುತ್ತಿದ್ದ ಕಾರಿನ ಬ್ರೇಕ್ ಪೆಡಲ್ ನಡಿಯಲ್ಲಿ ನೀರಿನ ಬಾಟಲ್ ಸಿಲುಕಿ ಸ್ಟ್ರಕ್ ಆಗಿತ್ತು. ಪರಿಣಾಮ ಬ್ರೇಕ್ ಪೆಡಲ್ ವರ್ಕ್ ಆಗದೆ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿತ್ತು ಎನ್ನಲಾಗಿದೆ.
ಅಪಘಾತದ ಪರಿಣಾಮ ಕಾರು ದ್ವಿಚಕ್ರ ವಾಹನವೊಂದಕ್ಕೆ ಗುದ್ದಿದೆ. ಪರಿಣಾಮ ಸವಾರನಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯಲ್ಲಿ 2 ಕಾರುಗಳು ಹಾಗೂ ದ್ವಿಚಕ್ರ ವಾಹನವೊಂದು ಜಖಂ ಆಗಿದೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಕಾರನ್ನು ವಶಪಡಿಸಿಕೊಂಡ ಪೊಲೀಸರು ಚಾಲಕ ವಿವೇಕಾನಂದ ಶೆಣೈ ವಿರುದ್ಧ ಮಂಗಳೂರಿನ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.