ಮಂಗಳೂರು ವಿಮಾನ ನಿಲ್ದಾಣ ತಲುಪಿದ ಉಕ್ರೇನ್ ನಿಂದ ಏರ್ ಲಿಫ್ಟ್ ಆದ ಮಂಗಳೂರಿನ ವಿದ್ಯಾರ್ಥಿನಿ ಅನುಷಾ ಭಟ್ (operation Ganga)

ಮಂಗಳೂರು ವಿಮಾನ ನಿಲ್ದಾಣ ತಲುಪಿದ ಉಕ್ರೇನ್ ನಿಂದ ಏರ್ ಲಿಫ್ಟ್ ಆದ ಮಂಗಳೂರಿನ ವಿದ್ಯಾರ್ಥಿನಿ ಅನುಷಾ ಭಟ್ (operation Ganga)

ಮಂಗಳೂರು: ಉಕ್ರೇನ್ ನಿಂದ ಏರ್ ಲಿಫ್ಟ್ ಆದ  ಮಂಗಳೂರಿನ ಮೊದಲ ವಿದ್ಯಾರ್ಥಿನಿ ಅನುಷಾ ಭಟ್ ಮಂಗಳೂರು ಏರ್ಪೋರ್ಟ್ ಗೆ ಆಗಮಿಸಿದ್ದಾರೆ‌. ಅವರನ್ನು ಪೋಷಕರು ಸೇರಿದಂತೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು.

ಮಂಗಳೂರಿನ ಬಿಜೈ ನ್ಯೂ ರೋಡ್ ನಿವಾಸಿ ಅನುಷಾ ಭಟ್  ರೊಮೇನಿಯಾದಿಂದ ಮುಂಬೈಗೆ ಆಗಮಿಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ‌. ಇವರು ಉಕ್ರೇನ್ ನ ವಿನ್ನೆಸ್ಟ್ಯಿಯಾ ನಗರದ ನ್ಯಾಷನಲ್ ಕಾಲೇಜಿನಲ್ಲಿ MBBS ಶಿಕ್ಷಣ ಪಡಿಯುತ್ತಿದ್ದರು‌.ಅನುಷಾ ಭಟ್ ಯುದ್ಧ ನಡೆಯುತ್ತಿದ್ದ  ಪ್ರದೇಶದಿಂದ ಸುಮಾರು 200 ಕಿ.ಮೀ. ದೂರದಲ್ಲಿದ್ದರು. ಮಂಗಳೂರಿಗೆ ಬಂದ ಪುತ್ರಿಯನ್ನು ಕಂಡು ಪೋಷಕರು ಅತೀವ ಸಂತಸಪಟ್ಟರು‌. ಅಲ್ಲದೆ ಪುತ್ರಿಯನ್ನು ಏರ್ ಲಿಫ್ಟ್ ಮಾಡಿ  ಸುರಕ್ಷಿತವಾಗಿ ಮಂಗಳೂರಿಗೆ ಕರೆ ತಂದಿರುವುದಕ್ಕೆ ಅನುಷಾ ಪೋಷಕರು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ  ಅನುಷಾ ಭಟ್ ಮಾತನಾಡಿ, ಬಸ್ ಬುಕ್ ಮಾಡಿ ಉಕ್ರೇನ್ ಬಾರ್ಡರ್ ಸಮೀಪ ಬಂದು ಅಲ್ಲಿಂದ 2ಕಿ.ಮೀ. ನಡೆದುಕೊಂಡು ಬಂದು ಬಾರ್ಡರ್ ತಲುಪಿದ್ದೆವು. ಫೆ.27ರಂದು ಬೆಳಗ್ಗೆ ನಾವು ತಲುಪಿದ್ದೇವೆ. ಉಕ್ರೇನ್ ರಷ್ಯಾ ಯುದ್ಧ ಘೋಷಣೆ ಮಾಡಿದ ಬಳಿಕ ನಾವು ಗೊಂದಲಕ್ಕೊಳಗಾಗಿದ್ದೆವು. ಅಲ್ಲದೆ ನಮಗೆ ಸ್ಟೆಪ್ ವನ್ ಎಕ್ಸಾಂ  ಇದ್ದ ಕಾರಣ ನಮಗೆ ಏನು ಮಾಡಬೇಕೆಂದು ತೋಚಲಿಲ್ಲ ಎಂದು ಹೇಳಿದರು.

ನಾವಿರುವ ಪ್ರದೇಶದಲ್ಲಿ ಯಾವುದೇ ದಾಳಿ ನಡೆದಿರಲಿಲ್ಲ. ಮನೆಯವರೊಂದಿಗೆ ನಾನು ನಿರಂತರ ಪೋನ್ ಸಂಪರ್ಕದಲ್ಲಿದ್ದೆ. ಕರೆ ಮಾಡುವುದಕ್ಕೆ ಯಾವುದೇ ತೊಡಕಾಗಿರಲಿಲ್ಲ. ಭಾರತ ಸರ್ಕಾರ‌ ನಮಗೆ ಸೇಪಾಗಿ ಏರ್ ಲಿಫ್ಟ್ ಮಾಡಲು ಬಹಳ ಸಹಕಾರ ಮಾಡಿದೆ.‌ ಮಂಗಳೂರಿಗೆ ಬಂದು ತಲುಪುವವರೆಗೂ ಸರಕಾರದ ಪ್ರತಿನಿಧಿಗಳು ನಿರಂತರ ನನ್ನ ಸಂಪರ್ಕದಲ್ಲಿದ್ದರು. ನಾನು ಬಂದಿರುವ ವಿಮಾನದಲ್ಲಿ ಎಲ್ಲರೂ ಭಾರತೀಯರೇ ಇದ್ದರು. ಎಲ್ಲರೂ ಸುರಕ್ಷಿತವಾಗಿ ಬಂದು ತಲುಪಿದ್ದಾರೆ.‌ ನನ್ನ ಕಾಲೇಜಿನಲ್ಲಿ ಒಬ್ಬಳು ಮಂಗಳೂರಿನ ವಿದ್ಯಾರ್ಥಿನಿಯಿದ್ದಳು‌. ಅವಳು ಇನ್ನಷ್ಟೇ ಏರ್ ಲಿಫ್ಟ್ ಆಗಬೇಕು ಎಂದು ಹೇಳಿದ್ದಾರೆ

Ads on article

Advertise in articles 1

advertising articles 2

Advertise under the article