ಮಂಗಳೂರು ‌: ನವೀಕರಣ ಮಾಡುತ್ತಿದ್ದ ವೇಳೆ ದರ್ಗಾವಿದ್ದ ಜಾಗದಲ್ಲೇ ಹಿಂದೂ ದೇವಾಲಯದ ಗರ್ಭಗುಡಿ ಪತ್ತೆ..!

ಮಂಗಳೂರು ‌: ನವೀಕರಣ ಮಾಡುತ್ತಿದ್ದ ವೇಳೆ ದರ್ಗಾವಿದ್ದ ಜಾಗದಲ್ಲೇ ಹಿಂದೂ ದೇವಾಲಯದ ಗರ್ಭಗುಡಿ ಪತ್ತೆ..!

ಮಂಗಳೂರು ತಾಲೂಕಿನ  ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಳಲಿಯಲ್ಲಿರುವ ಇತಿಹಾಸ ಪ್ರಸಿದ್ಧ ಅಸ್ಸಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾ ಶರೀಫ್ ಜುಮಾ ಮಸೀದಿಯ ಒಳಭಾಗದಲ್ಲಿ ದೇವಸ್ಥಾನದ ಗರ್ಭಗುಡಿ ಇರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಮಸೀದಿಯ  ಕೆಲವು ಭಾಗಗಳನ್ನು  ನವೀಕರಣದ ಸಲುವಾಗಿ ಕೆಡವಿದಾಗ ದೇವಸ್ಥಾನ ಇರುವಿಕೆಯು ಗೊತ್ತಾಗಿತ್ತು.
ಈ ವಿಚಾರ ಸೋಶಿಯಲ್ ಮಿಡಿಯಾಗಳಲ್ಲಿ ಪ್ರಚಾರವಾಗುತ್ತಿದಂತೆ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮಂಗಳೂರು ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತು ಬಜಪೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಎರಡೂ ಧರ್ಮದ ಮುಖಂಡರುಗಳ ಜತೆ ಚರ್ಚಿಸಿ ಪರಿಸ್ಥಿತಿ ಬೀಗಡಾಯಿಸದಂತೆ ಕ್ರಮ ಕೈಗೊಂಡರು. 

 ಮಸೀದಿಯ ದಾಖಲೆಗಳನ್ನು ಪರಿಶೀಲಿಸಿ ತಾತ್ಕಾಲಿಕವಾಗಿ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿನೆ ನೀಡಿದ್ದಾರೆ.  ಒಳಗಡೆ ಹಿಂದು ದೇವಸ್ಥಾನದಲ್ಲಿ ಕಂಡು ಬರುವ ಕೆತ್ತನೆ,  ಕಲಷ, ತೋಮರ, ಕುಸುರಿ ಕೆತ್ತನೆಯ ಕಂಬಗಳು, ಮಧ್ಯೆ ಎತ್ತರದ ಗರ್ಭಗುಡಿಯಂತಿರುವ ಜಾಗವಿದ್ದು ಮೇಲಕ್ಕೆ ನಾಲ್ಕೈದು ಮೆಟ್ಟಿಲುಗಳಿದ್ದು  ಅಲ್ಲಿ ಒಂದು ಪೀಠದ ರಚನೆ ಇದೆ.

Ads on article

Advertise in articles 1

advertising articles 2

Advertise under the article