mysore:ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿ ಹೆತ್ತವರಿಂದಲೇ ಮಗಳ ಮರ್ಯಾದಾ ಹತ್ಯೆ...!

mysore:ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿ ಹೆತ್ತವರಿಂದಲೇ ಮಗಳ ಮರ್ಯಾದಾ ಹತ್ಯೆ...!

ಮೈಸೂರು: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ಹೆತ್ತವರೇ ಮಗಳನ್ನು ಕೊಲೆ ಮಾಡಿರುವ  ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದೆ.ದ್ವಿತೀಯ ಪಿಯು ಓದುತ್ತಿದ್ದ 17 ವರ್ಷದ ಶಾಲಿನಿ ಕೊಲೆಯಾದ ದುರ್ದೈವಿ. 

ಕಳೆದ ಮೂರು ವರ್ಷದಿಂದ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಹೆತ್ತವರ ವಿರೋಧದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿ ಶಾಲಿನಿ ಬಾಲಮಂದಿರದಲ್ಲಿದ್ದಳು.

ಇತ್ತೀಚೆಗಷ್ಟೇ ಮಗಳನ್ನು ಮನೆಗೆ ಕರೆತಂದಿದ್ದ ಪೋಷಕರು  ನಿಗೂಢವಾಗಿ ಕೊಲೆ ಮಾಡಿದ್ದರು. ಯುವತಿಯ ಮೃತದೇಹ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿದೆ.

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತಂದೆ ಮತ್ತು ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ತಮಗೆ ಅವಮಾನ ಮಾಡಿದ ಕಾರಣಕ್ಕೆ ತಾವೇ ಮಗಳನ್ನು ಕೊಲೆ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ.ಘಟನೆ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Ads on article

Advertise in articles 1

advertising articles 2

Advertise under the article