Mangalore: ಶರ್ಟ್ - ಬನಿಯನ್ ಕಳಚಿ ದೇವಸ್ಥಾನ ಪ್ರವೇಶಕ್ಕೆ ಎನ್ಇಸಿಎಫ್ ಸಂಸ್ಥೆ ಆಕ್ಷೇಪಣೆ: ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ

Mangalore: ಶರ್ಟ್ - ಬನಿಯನ್ ಕಳಚಿ ದೇವಸ್ಥಾನ ಪ್ರವೇಶಕ್ಕೆ ಎನ್ಇಸಿಎಫ್ ಸಂಸ್ಥೆ ಆಕ್ಷೇಪಣೆ: ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ

ಮಂಗಳೂರು: ಕೆಲವೊಂದು ದೇವಸ್ಥಾನಗಳಲ್ಲಿ ಶರ್ಟ್ - ಬನಿಯನ್ ತೆಗೆದು ಒಳಪ್ರವೇಶಿಸಬೇಕು ಎಂಬ ನಿಯಮವಿದೆ. ಇಲ್ಲದಿದ್ದಲ್ಲಿ ದೇವಾಲಯ ಒಳ ಪ್ರವೇಶ ನಿರಾಕರಿಸಲಾಗುತ್ತದೆ. ಇದೀಗ ಈ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಂಗಳೂರಿನ ಎನ್ಇಸಿಎಫ್ ಸಂಸ್ಥೆ, ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ ಸಲ್ಲಿಸಿದೆ.
ಕರಾವಳಿಯ ಅತ್ಯಂತ ಪುರಾತನ, ಇತಿಹಾಸ ಪ್ರಸಿದ್ಧ ದೇವಾಲಯಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ದೇವಸ್ಥಾನಗಳ ವಿರುದ್ಧ ಈ ಅರ್ಜಿ ಸಲ್ಲಿಕೆಯಾಗಿದೆ. ಈ ದೂರಿನಲ್ಲಿ ದೇವರ ದರ್ಶನ ಪಡೆಯಲು‌ ದೇವಾಲಯ ಪ್ರವೇಶಕ್ಕೆ ಮುನ್ನ ಅಂಗಿ - ಬನಿಯನ್ ಕಳಚಿ ಪ್ರವೇಶ ಮಾಡುವ ಪದ್ಧತಿ ಸರಿಯಲ್ಲ. ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ದೇವಾಲಯಕ್ಕೆ ಪ್ರವೇಶಿಸುವ ಮೊದಲು ಮೇಲುಡುಗೆ ಕಳಚುವ ಯಾವ ಪದ್ಧತಿಯೂ ಇಲ್ಲ. ಅಲ್ಲದೆ ಈ ನಿಯಮ ಸರಕಾರದ ನಿಯಮಾವಳಿಗಳ ಪ್ರಕಾರದಲ್ಲೂ ಇಲ್ಲ ಎಂಬುದು ಎನ್ಇಸಿಎಫ್ ವಾದ.
ಅಲ್ಲದೆ ಅಂಗಿ ಕಳಚುವುದರಿಂದ ಚರ್ಮರೋಗ ಸಂಭವ ಇರುವುದು ಮಾತ್ರವಲ್ಲದೆ, ವಿಕಲಚೇತನರಿಗೆ ಮುಜುಗರವೂ ಉಂಟಾಗುತ್ತದೆ. ಇದು ಸಂವಿಧಾನದ ಹಕ್ಕಿನ ಉಲ್ಲಂಘನೆಯೂ‌ ಆಗುತ್ತಾದ್ದರಿಂದ ಪುರುಷರ ಮೇಲುಡುಗೆ ಕಳಚಿ ದೇವಾಲಯ ಪ್ರವೇಶಿಸುವ ವಿಚಾರದಲ್ಲಿ ಎನ್ಇಸಿಎಫ್ ಆಕ್ಷೇಪ ಎತ್ತಿದೆ.ದಾರ್ಮಿಕ ದತ್ತಿ ಇಲಾಖೆಗೆ ತಕ್ಷಣ ಈ ನಿಯಮವನ್ನು ರದ್ದುಪಡಿಸುವಂತೆ ಎನ್ಇಸಿಎಫ್ ಒತ್ತಾಯಿಸಿದೆ. ಇದಕ್ಕೆ 15 ದಿನಗಳಲ್ಲಿ ಸ್ಪಷ್ಟ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದೆ.

Ads on article

Advertise in articles 1

advertising articles 2

Advertise under the article