Mumbai: ಹಿಂದೂ ಯುವತಿಯನ್ನು ಪ್ರೀತಿಸಿ ಮದುವೆಯಾಗಿ ಬುರ್ಖಾ ಧರಿಸಿಲ್ಲವೆಂದು ಕತ್ತು ಸೀಳಿ ಕೊಲೆಗೈದ ಮುಸ್ಲಿಂ ಪತಿ
Wednesday, September 28, 2022
Mumbai:ಹಿಂದೂ ಯುವತಿಯನ್ನುಮದುವೆಯಾಗಿ ಆಕೆ ಬುರ್ಖಾ ತೊಟ್ಟಿಲ್ಲ.ಇಸ್ಲಾಂ ಸಂಪ್ರದಾಯ ಪಾಲಿಸಿಲ್ಲಿ ಎಂಬ ಕಾರಣಕ್ಕೆ ಮುಸ್ಲಿಂ ಯುವಕ ತನ್ನ ಪತ್ನಿಯನ್ನೇ ಕತ್ತು ಸೀಳಿ ಕೊಲೆಗೈದ ಘಟನೆ ಮುಂಬೈನ ತಿಲಕ್ ನಗರದಲ್ಲಿ ನಡೆದಿದೆ.
ಮುಂಬೈನ ತಿಲಕ್ ನಗರದಲ್ಲಿ ಘಟನೆ ನಡೆದಿದ್ದು, ಯುವತಿ ಕುಟುಂಬಸ್ಥರ ದೂರಿನಂತೆ ಕಟುಕ ಪತಿ ಇಕ್ಪಾಲ್ ಮಹಮ್ಮದ್ ಶೇಖ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ವರ್ಷಗಳ ಹಿಂದೆ ರೂಪಾಲಿ ಮತ್ತು ಇಕ್ಪಾಲ್ ಮಹಮ್ಮದ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಬಳಿಕ ಇಸ್ಲಾಂ ಸಂಪ್ರದಾಯ ಅನುಸರಿಸಬೇಕೆಂದು ಆತನ ಮನೆಯವರು ಒತ್ತಡ ಹೇರಿದ್ದು ಇದರಿಂದ ಯುವತಿ ತೀವ್ರ ಕಿರುಕುಳ ಅನುಭವಿಸಿದ್ದಳು. ಆದರೆ 22 ವರ್ಷದ ಯುವತಿ ಬುರ್ಖಾ ಧರಿಸಿ ಮನೆಯೊಳಗೆ ಕುಳಿತುಕೊಳ್ಳಲು ಸಿದ್ಧಳಿರಲಿಲ್ಲ. ಬದಲಿಗೆ ತಾನು ಪ್ರತ್ಯೇಕವಾಗಿ ಇರುತ್ತೇನೆಂದು ರೂಪಾಲಿ ಇತ್ತೀಚೆಗೆ ಬೇರೆಯೇ ಉಳಿದುಕೊಂಡಿದ್ದಳು.
ಸೆಪ್ಟೆಂಬರ್ 26ರಂದು ಸಂಜೆ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ ಮಹಮ್ಮದ್ ಇಕ್ಪಾಲ್, ಜಗಳ ಶುರು ಮಾಡಿದ್ದಾನೆ. ತನಗೆ ಡೈವರ್ಸ್ ನೀಡುವಂತೆ ರೂಪಾಲಿ ಕೇಳಿದ್ದಕ್ಕೆ ಮಗುವನ್ನು ಬಿಟ್ಟು ಕೊಡುವಂತೆ ಹೇಳಿದ್ದ. ಮಗುವನ್ನು ನೀಡಲು ರೂಪಾಲಿ ನಿರಾಕರಿಸಿದ್ದು ಇದೇ ವಿಚಾರದಲ್ಲಿ ಜಗಳ ನಡೆದು ಇಕ್ಪಾಲ್ ತನ್ನ ಪತ್ನಿಯ ಕುತ್ತಿಗೆಯನ್ನು ಚೂರಿಯಿಂದ ಸೀಳಿ ಕೊಲೆ ಮಾಡಿದ್ದಾನೆ.
ಮದುವೆಯಾದ ದಿನದಿಂದಲೂ ರೂಪಾಲಿ ಬುರ್ಖಾ ಧರಿಸಬೇಕೆಂದು ಇಕ್ಪಾಲ್ ಕುಟುಂಬಸ್ಥರು ಒತ್ತಾಯಿಸಿದ್ದರು. ಆದರೆ ರೂಪಾಲಿ ಬುರ್ಖಾ ಧರಿಸುವುದಕ್ಕೆ ನಿರಾಕರಿಸಿದ್ದಳು. ಇದೇ ವಿಚಾರದಲ್ಲಿ ಇಕ್ಪಾಲ್ ಮತ್ತು ರೂಪಾಲಿ ಮಧ್ಯೆ ಗಲಾಟೆ ನಡೆಯುತ್ತಲೇ ಇತ್ತು. ಇತ್ತೀಚೆಗೆ ಕೆಲವು ತಿಂಗಳಿಂದ ರೂಪಾಲಿ ಗಂಡನ ಮನೆಯನ್ನು ಬಿಟ್ಟು ಮಗುವಿನೊಂದಿಗೆ ಬೇರೆ ಕಡೆ ಉಳಿದುಕೊಂಡಿದ್ದಳು. ಡೈವರ್ಸ್ ನೀಡುವಂತೆ ಕೇಳಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ.