ಸುರತ್ಕಲ್: ಮೀನುಗಾರನ ಬಲೆಗೆ 400 ಕೆಜಿಗೂ ಅಧಿಕ ಮೀನು; ಮುಗಿಬಿದ್ದ ಮೀನುಪ್ರಿಯರು
Tuesday, October 11, 2022
ಸುರತ್ಕಲ್: ಮಂಗಳೂರು ನಗರದ ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಇಂದು ಬೆಳಗ್ಗೆ ಮೀನುಗಾರನೊಬ್ಬ ಹಾಕಿದ ಬಲೆಗೆ ರಾಶಿ ರಾಶಿ ಮೀನು ಬಿದ್ದಿದೆ. ವಿವಿಧ ಮೀನುಗಳ ರಾಶಿಯ ಖರೀದಿಗೆ ಮೀನುಪ್ರಿಯರು ಮುಗಿಬಿದ್ದಿದ್ದಾರೆ.
ಜೀವನ್ ಪಿರೇರಾ ಎಂಬ ಮೀನುಗಾರ ಹಾಕಿರುವ ಕೈರಂಪೊನಿ ಬಲೆಗೆ ಮತ್ಯ್ಯ ಸಮೂಹವೇ ಬಿದ್ದಿದೆ. ದಡದಿಂದ ಬೀಸುವ ಕೈರಂಪೊನಿ ಬಲೆಗೆ ಸುಮಾರು 400 ಕೆಜಿಯಷ್ಟು ಮೀನು ಬಿದ್ದಿರೋದು ಮೀನುಗಾರನಿಗೆ ಅದೃಷ್ಟ ಲಕ್ಷ್ಮಿಯೇ ಒಲಿದಂತಾಗಿದೆ.
ಇವರು ಹಾಕಿರುವ ಕೈರಂಪೊನಿ ಬಲೆಗೆ ಬಂಗುಡೆ, ಕೊಡ್ಡಾಯಿ, ಕಲ್ಲೂರು ಮೀನುಗಳ ಸಮೂಹವೇ ಬಿದ್ದಿದೆ. ಈ ರಾಶಿ ರಾಶಿ ಮೀನುಗಳನ್ನು ಕಂಡು ಜನರು ಖರೀದಿಗೆ ಮುಗಿಬಿದ್ದಿದ್ದಾರೆ.