ಮಂಗಳೂರು: ಲಾರಿ ಢಿಕ್ಕಿಯಾಗಿ ವಾಕಿಂಗ್ ನಿರತ ವ್ಯಕ್ತಿ ಮೃತ್ಯು

ಮಂಗಳೂರು: ಲಾರಿ ಢಿಕ್ಕಿಯಾಗಿ ವಾಕಿಂಗ್ ನಿರತ ವ್ಯಕ್ತಿ ಮೃತ್ಯು


ಮಂಗಳೂರು: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಕೊಟ್ಟಾರ ಚೌಕಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ. 

ಅಶೋಕನಗರದ ನಿವಾಸಿ 40-45 ವರ್ಷದ ವ್ಯಕ್ತಿ ಮೃತಪಟ್ಟ ದುರ್ದೈವಿ.
ಅವರು ತಮ್ಮ ಆ್ಯಕ್ಟಿವಾ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವಾಕಿಂಗ್ ನಿರತರಾಗಿದ್ದರು. ಈ ವೇಳೆ ಹರ್ಯಾಣದ ನೋಂದಣಿಯ ಲಾರಿಯೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಪಾದಚಾರಿ ವ್ಯಕ್ತಿಯು ಗಂಭೀರ ಗಾಯಗೊಂಡಿದ್ದು, ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು   ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. 

ಈ ಬಗ್ಗೆ ಸಂಚಾರ ಉತ್ತರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article