ಮಂಗಳೂರು: ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್ ಗೆ ಹಾನಿ; ಪ್ರಕರಣ ದಾಖಲು

ಮಂಗಳೂರು: ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್ ಗೆ ಹಾನಿ; ಪ್ರಕರಣ ದಾಖಲು


ಮಂಗಳೂರು: ನಗರದ ಹೊರವಲಯದಲ್ಲಿರುವ ವಾಮಂಜೂರಿನಲ್ಲಿ ಶಾರದೋತ್ಸವ ಬ್ಯಾನರ್ ಗೆ ಹಾನಿ ಮಾಡುವ ಮೂಲಕ ದ.ಕ.ಜಿಲ್ಲೆಯಲ್ಲಿ ಮತ್ತೆ ಅಶಾಂತಿ ಸೃಷ್ಟಿಸಲು ಹುನ್ನಾರವನ್ನು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ತಡರಾತ್ರಿ 1.30 - 2ರ ನಡುವೆ ಈ ಕೃತ್ಯವನ್ನು ದುಷ್ಕರ್ಮಿಗಳು ಎಸಗಿದ್ದಾರೆಂದು ದೂರಲಾಗಿದೆ. ಸ್ಥಳೀಯ ಹಿಂದೂ ಯುವಕರ ತಂಡವೊಂದು ಬ್ಯಾನರ್ ಹಾನಿಗೊಳಿಸಿದೆ ಎಂದು ಹೇಳಲಾಗಿದೆ. ಈ ವೇಳೆ 10ಕ್ಕೂ ಅಧಿಕ ಬ್ಯಾನರ್ ಗಳಿಗೆ ಹಾನಿಗೊಂಡಿದೆ.

ಬ್ಯಾನರ್ ಗೆ ಹಾನಿ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಬಗ್ಗೆ ವಾಮಂಜೂರಿನ ಹುಲಿವೇಷ ತಂಡವು ಠಾಣೆಗೆ ದೂರು ನೀಡಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article