ನ.5 ರಂದು ನಿಟ್ಟೆ ವಿವಿ ಘಟಿಕೋತ್ಸವ:ಕುಲಪತಿ ಪ್ರೊ ಸತೀಶ್ ಕುಮಾರ್ ಭಂಡಾರಿ ಮಾಹಿತಿ
Thursday, November 3, 2022
ಮಂಗಳೂರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ನ.5ರಂದು ಬೆಳಗ್ಗೆ 10ಕ್ಕೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯಲಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ಅಧ್ಯಕ್ಷ ಪ್ರೊ.ಮಮದಿಲ ಜಗದೀಶ್ ಕುಮಾರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕುಲಾಧಿಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಎಂದು ಕುಲಪತಿ ಪ್ರೊ.ಸತೀಶ್ ಭಂಡಾರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಘಟಕೋತ್ಸವದಲ್ಲಿ ಒಟ್ಟು 994 ಅಭ್ಯರ್ಥಿಗಳು ಸ್ನಾತಕ, ಸ್ನಾತಕೋತ್ತರ, ಡಾಕ್ಟೋರಲ್ ಪದವಿ ಹಾಗೂ ಫೆಲೋಶಿಪ್ ಪಡೆಯಲಿದ್ದಾರೆ. ಒಟ್ಟು 21 ಡಾಕ್ಟೋರಲ್ 324 ಸ್ನಾತಕೋತ್ತರ, 647 ಸ್ನಾತಕ ಪದವಿ ಹಾಗೂ 2 ಫೆಲೋಶಿಪ್ ನೀಡಲಾಗುವುದು. ವೈದ್ಯಕೀಯ, ದಂತ ವೈದ್ಯಕೀಯ, ಔಷಧ ವಿಜ್ಞಾನ, ಅನ್ವಯಿಕ ಆರೋಗ್ಯ ವಿಜ್ಞಾನ, ನರ್ಸಿಂಗ್, ಮಾಧ್ಯಮ ಮತ್ತು ಸಂವಹನ, ವಾಸ್ತುಶಿಲ್ಪ ಮತ್ತು ಇತರ ವಿಷಯಗಳಲ್ಲಿ ಈ ಪದವಿಗಳನ್ನು ಪ್ರದಾನ ಮಾಡಲಾಗುತ್ತಿದೆ. ಒಟ್ಟು 20 ಚಿನ್ನದ ಪದಕಗಳು, 9 ದತ್ತಿ ಪದಕಗಳು, 11 ವಿಶ್ವವಿದ್ಯಾಲಯ ಪದಕಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ನಿವೃತ್ತ ಹಿರಿಯ ಸಲಹೆಗಾರ ಪ್ರೊ.ಟಿ.ಎಸ್.ರಾವ್' ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿರುವ ಪ್ರೊ.ರಾವ್, ರಾಷ್ಟ್ರೀಯ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸತೀಶ್ ಕುಮಾರ್ ಭಂಡಾರಿ ಹೇಳಿದರು.
ಎರಡು ವರ್ಷ ವಿದೇಶದಲ್ಲಿ ಶಿಕ್ಷಣ ಪಡೆದರ ವಿದೇಶಿ ವಿವಿ ಪದವಿ ಒಪ್ಪಂದ ನೀಡುತ್ತದೆ ಎಂದು ಪ್ರೊ.ಸತೀಶ್ ಕುಮಾರ್ ಭಂಡಾರಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಬಳಿಕ ನಿಟ್ಟೆ ವಿಶ್ವವಿದ್ಯಾಲಯ ವಿದೇಶಿ ಸೇರಿದಂತೆ 27 ವಿಶ್ವವಿದ್ಯಾಲಯದ ಜತೆ ಒಪ್ಪಂದ ಮಾಡಿಕೊಂಡಿದೆ. ಎರಡು ವರ್ಷ ಇಲ್ಲಿ, ಒಂದು ವರ್ಷ ಅಲ್ಲಿ, ಮತ್ತೆ ಒಂದು ವರ್ಷ ಇಲ್ಲಿ ಶಿಕ್ಷಣ ಪಡೆದರೆ ನಿಟ್ಟೆ ಪಿವಿ ಪದವಿ ನೀಡುತ್ತದೆ. ಇದರಿಂದ ವಿದೇಶಿಯರಿಗೆ ಇಲ್ಲಿನ ಸಂಸ್ಕೃತಿ, ಶಿಕ್ಷಣ ವ್ಯವಸ್ಥೆ ಮೊದಲಾದವುಗಳ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡಲು ಆಸಕ್ತರಿದ್ದವರಿಗೆ ಅಲ್ಲಿನ ವಿವಿಯಿಂದ ಪದವಿ ಪಡೆದು ಅಲ್ಲೇ ಉದ್ಯೋಗ ಮುಂದುವರಿಸ ಬಹುದಾಗಿದೆ. ಆಸ್ಟ್ರೇಲಿಯಾ, ಜಪಾನ್, ಮಲೇಷ್ಯಾ, ಸಿಕಾಗೊ ಮೊದಲಾದ ವಿವಿ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.ಸಹಕುಲಪತಿ ಪ್ರೊ.ಎಂ.ಎಸ್ ಮೂಡಿತ್ತಾಯ, ಕುಲಸಚಿವ ಪ್ರೊ.ಹರ್ಷ ಹಾಲಹಳ್ಳಿ, ಪರೀಕ್ಷಾ ನಿಯಂತ್ರಕ ಪ್ರೊ.ಪ್ರಸಾದ್ ಬಿ.ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.