ದಕ್ಷಿಣ ಭಾರತದ ಹೆಸರಾಂತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದ ಬ್ರಹ್ಮರಥೋತ್ಸವ; ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ಸುಬ್ರಹ್ಮಣ್ಯ

ದಕ್ಷಿಣ ಭಾರತದ ಹೆಸರಾಂತ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದ ಬ್ರಹ್ಮರಥೋತ್ಸವ; ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ ಸುಬ್ರಹ್ಮಣ್ಯ

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ  ಕ್ಷೇತ್ರದಲ್ಲಿ ಚಂಪಾ ಷಷ್ಠಿಯ ವೈಭವ ಮೇಳೈಸಿದೆ. ಚಂಪಾ ಷಷ್ಠಿಯ ಹಿನ್ನಲೆಯಲ್ಲಿ  ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥದಲ್ಲಿ ರಥಾರೂಢನಾಗಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ್ದಾನೆ. ದಕ್ಷಿಣ ಭಾರತದ ಪರಮ ಪವಿತ್ರ, ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ವರ್ಷದ ಅದ್ಭುತ ಸನ್ನಿವೇಶಕ್ಕೆ ಮತ್ತೆ ಸಾಕ್ಷಿಯಾಯಿತು. ಮುಂಜಾವು ಬೆಳಕು ಹರಿಯುವ ಸಂದರ್ಭದಲ್ಲಿ ದೇವಳದ ಮುಂಭಾಗದಲ್ಲಿರುವ ಬ್ರಹ್ಮರಥವನ್ನೇರಿದ ಸುಬ್ರಹ್ಮಣ್ಯ ಲಕ್ಷಾಂತರ ಜನರಿಗೆ ದರುಶನ ಭಾಗ್ಯ ನೀಡಿದ್ದಾನೆ. 
ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಇಂದು (ಮಂಗಳವಾರ) ಪ್ರಾತಃಕಾಲ 7.05ರ ವೃಶ್ಚಿಕ ಲಗ್ನ ಸುಮೂಹುರ್ತದಲ್ಲಿ ಶ್ರೀ ಕುಕ್ಕೆಸುಬ್ರಹ್ಮಣ್ಯ ದೇವರು ಬ್ರಹ್ಮರಥದ ಮೇಲೆ ವಿರಾಜಮಾನರಾಗಿ ನೆರೆದ ಭಕ್ತ ಸಮೂಹಕ್ಕೆ ದರ್ಶನ ನೀಡಿದ್ದಾನೆ. ಇದಕ್ಕೂ ಮುನ್ನ ದೇವಳದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದಿದ್ದವು.
ಮೊದಲು ಉಮಾಮಹೇಶ್ವರ ದೇವರು ಆಸೀನರಾದ ಚಿಕ್ಕ ತೇರು ರಥ ಬೀದಿಯಲ್ಲಿ ಮುಂದೆ ಸಾಗಿದರೆ ಬಳಿಕ ಸುಬ್ರಹ್ಮಣ್ಯನನ್ನು ಹೊತ್ತ ಬ್ರಹ್ಮ ರಥ ಸಾಗಿದೆ. ಬ್ರಹ್ಮ ರಥವನ್ನು ಎಳೆಯಲು ಮೊದಲೇ ಸೇವೆಯನ್ನು ಬುಕ್ಕಿಂಗ್ ಮಾಡಿದವರಿಗಷ್ಟೇ ಅವಕಾಶ ನೀಡಲಾಗಿತ್ತು. ಲಕ್ಷಾಂತರ ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೇರಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದರು. ಬ್ರಹ್ಮ ರಥ ಸಾಗುತ್ತಿರುವಾಗ ತೇರಿಗೆ ಎಳ್ಳು, ನಾಣ್ಯಗಳನ್ನು ಎಸೆದು ಹರಕೆ ತೀರಿಸಿಕೊಂಡಿದ್ದಾರೆ. ತೇರು ಸಂಪೂರ್ಣ ವಾದ ಬಳಿಕ ರಥದಲ್ಲಿ ಅಳವಡಿಸಲಾಗಿದ್ದ ಹಿಂಗಾರ, ಫಲಪುಷ್ಪಗಳನ್ನು ಅರ್ಚಕರು ಭಕ್ತರತ್ತ ವೃಷ್ಟಿ ಮಾಡಿದರು.

Ads on article

Advertise in articles 1

advertising articles 2

Advertise under the article