Mangalore: ಕೋವಿಡ್ ಬಳಿಕ ನವ ಮಂಗಳೂರು ಬಂದರಿಗೆ ಆಗಮಿಸಿದ 'ಯುರೋಪ 2' ಪ್ರಪ್ರಥಮ ಐಷಾರಾಮಿ ಕ್ರೂಸ್

Mangalore: ಕೋವಿಡ್ ಬಳಿಕ ನವ ಮಂಗಳೂರು ಬಂದರಿಗೆ ಆಗಮಿಸಿದ 'ಯುರೋಪ 2' ಪ್ರಪ್ರಥಮ ಐಷಾರಾಮಿ ಕ್ರೂಸ್

ಮಂಗಳೂರು: ಕೋವಿಡ್ ನಂತರ ಸುಮಾರು ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನವ ಮಂಗಳೂರು ಬಂದರಿನ ತೀರಕ್ಕೆ ಇಂದು ಯೂರೋಪ್‌ನ ಮಾಲ್ಟಾದಿಂದ ಐಷಾರಾಮಿ ಪ್ರಯಾಣಿಕ 'ಯುರೋಪ 2' ಕ್ರೂಸ್ ಆಗಮಿಸಿದೆ. 
271 ಪ್ರಯಾಣಿಕರು ಹಾಗೂ 373 ಮಂದಿ ಸಿಬ್ಬಂದಿಯನ್ನು ಹೊತ್ತು ತಂದ ಎಂಎಸ್ 'ಯುರೋಪ 2' ಇಂದು ಬೆಳಗ್ಗೆ 6.30ಕ್ಕೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. 224.38 ಮೀಟರ್ ಉದ್ದ ಹಾಗೂ 29.99 ಮೀಟರ್ ಅಗಲದ ಈ ಪ್ರಯಾಣಿಕ ಹಡಗು ಗೋವಾದಿಂದ ಮಂಗಳೂರಿಗೆ ಆಗಮಿಸಿದೆ. 
ನವ ಮಂಗಳೂರು ಬಂದರು ಅಧಿಕಾರಿಗಳು ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆಗಳನ್ನು ಕಲ್ಪಿಸಿದ್ದಾರೆ. ಹಡಗಿನಿಂದ ಇಳಿದ ಪ್ರಯಾಣಿಕರಿಗೆ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಲು ಬಸ್ಸು, ಕಾರುಗಳು, ಪ್ರೀಪೇಯ್ ಟಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಸಂತ ಅಲೋಶಿಯಸ್ ಕಾಲೇಜು, ಕುದ್ರೋಳಿ ದೇವಸ್ಥಾನ, ಮಾರುಕಟ್ಟೆ, ಗೇರುಬೀಜ ಕಾರ್ಖಾನೆ, ಫಿಝಾ ಮಾಲ್ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು. ಆ ಬಳಿಕ ಈ ಕ್ರೂಸ್ ಮಧ್ಯಾಹ್ನ ವೇಳೆಗೆ ಕೊಚ್ಚಿನ್ ಬಂದರಿನತ್ತ ಪ್ರಯಾಣಿಸಿದೆ.

Ads on article

Advertise in articles 1

advertising articles 2

Advertise under the article