Mangalore: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಸ್ಪಾಟ್ ನಲ್ಲಿ ವಾರದ ಬಳಿಕ ಪ್ರತ್ಯಕ್ಷವಾದ ಉಸ್ತುವಾರಿ ಸಚಿವ ಸುನಿಲ್ ಕುಮಾರ್
Thursday, November 24, 2022
ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಸ್ಪಾಟ್ ನಲ್ಲಿ ವಾರದ ಬಳಿಕ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಪ್ರತ್ಯಕ್ಷವಾಗಿದ್ದಾರೆ.ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ವೀಕ್ಷಣೆ ಮಾಡಿದ್ದಾರೆ.
ನವೆಂಬರ್ 19ರಂದು ಸಂಜೆ 4.50 ಸುಮಾರಿಗೆ ಕಂಕನಾಡಿ ಠಾಣಾ ವ್ಯಾಪ್ತಿಯ ನಾಗುರಿ ಬಳಿ ಆಟೋರಿಕ್ಷಾದಲ್ಲಿ ಶಂಕಿತ ಭಯೋತ್ಪಾದಕ ಶಾರೀಕ್ ನಲ್ಲಿದ್ದ ಕುಕ್ಕರ್ ಬಾಂಬ್ ಸ್ಪೋಟ ಆಗಿತ್ತು. ಇಂದಿಗೆ ಘಟನೆ ನಡೆದು ಸರಿಯಾಗಿ ಏಳು ದಿನ. ಗೃಹಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿದಾಗಲೂ ಸಚಿವರು ಬಂದಿರಲಿಲ್ಲ. ಈ ನಡುವೆ ಸ್ಥಳ ಮಹಜರು ಕಾರ್ಯ ಪೂರ್ಣವಾಗಿದ್ದು, ಸ್ಪಾಟ್ ನಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ತೆಗೆಯಲಾಗಿದೆ. ಸ್ಫೋಟ ನಡೆದಿದ್ದ ಆಟೋರಿಕ್ಷಾವನ್ನು ಕೂಡಾ ಬೇರೆಡೆ ಸ್ಥಳಾಂತರಿಸಲಾಗಿದೆ. ಆದರೆ ಇಂದು ಸಚಿವರು ಕಾಟಾಚಾರಕ್ಕೆ ಬಂದು ಪರಿಶೀಲನೆ ನಡೆಸಿದಂತಿತ್ತು.
ಬಳಿಕ ಮಾತನಾಡಿದ ಅವರು, ಬಾಂಬ್ ಬ್ಲಾಸ್ಟ್ ಘಟನೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರ ಮಾಡಲಾಗಿದೆ. ಈ ಘಟನೆಯ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. PFI ನಿಷೇಧದ ಬಳಿಕ ಇಂಥಹ ಘಟನೆಗಳಿಗೆ ಸರ್ಕಾರ ಕಡಿವಾಣ ಹಾಕಿದೆ. ಉಗ್ರರ ಸಂಚುಗಳನ್ನು ವಿಫಲಗೊಳಿಸೋ ಕೆಲಸ ಸರ್ಕಾರ ಮಾಡ್ತಾ ಇದೆ. ಸರಕಾರ ಮೃದು ಧೋರಣೆ ತಳೆದಿಲ್ಲ.NIA ಘಟಕ ಇವತ್ತಲ್ಲ ನಾಳೆ ದ.ಕ.ಜಿಲ್ಲೆಯಲ್ಲಿ ಅನುಷ್ಠಾನವಾಗಲಿದೆ. ಪ್ರಕರಣದಲ್ಲಿ ಸಂತ್ರಸ್ತ ಆಟೋ ಡ್ರೈವರ್ ಕುಟುಂಬಕ್ಕೆ ಸರಕಾರದ ಕಡೆಯಿಂದ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.
Video