ಗುಲಾಮಿ ಸ್ಥಿತಿಯದ್ದು ಬೇಕಿಲ್ಲ, ಸಲಾಂ ಆರತಿ ಬದಲಾಗಬೇಕು ; ಗೃಹ ಸಚಿವ ಆರಗ ಜ್ಞಾನೇಂದ್ರ

ಗುಲಾಮಿ ಸ್ಥಿತಿಯದ್ದು ಬೇಕಿಲ್ಲ, ಸಲಾಂ ಆರತಿ ಬದಲಾಗಬೇಕು ; ಗೃಹ ಸಚಿವ ಆರಗ ಜ್ಞಾನೇಂದ್ರ

ಮಂಗಳೂರು: ನೈತಿಕ ಪೊಲೀಸ್ ಗಿರಿ ನಡೆದಲ್ಲಿ ಪರಿಶೀಲಿಸಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರಿನಲ್ಲಿಂದು ಹೇಳಿದರು.

ದ.ಕ.ಜಿಲ್ಲೆಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಬಗ್ಗೆ ಕಾನೂನು ಕ್ರಮದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ಯಾರೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಬಾರದು. ಶಾಂತಿ ಸಹಕಾರ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಇತ್ತೀಚಿಗೆ ದ.ಕ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಎಲ್ಲವೂ ಸರಿಯಾಗಿದೆ. ಒಂದೆರಡು ಹತ್ಯೆ ಪ್ರಕರಣಗಳು ಬಿಟ್ಟರೆ ಮತ್ತೆಲ್ಲವೂ ಆ ಮಟ್ಟದಲ್ಲಿ ಯಾವುದೂ ನಡೆದಿಲ್ಲ ಎಂದರು.

ಸಲಾಂ ಆರತಿ ನಿಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲವೂ ಸರಿಯಿದೆ. ಯಾವುದೋ ಗುಲಾಮಿ ಪರಿಸ್ಥಿತಿಯಲ್ಲಿ ಅದೆಲ್ಲವೂ ಆಗಿದೆ. ಅದನ್ನು ಬದಲಾಯಿಸಬೇಕು. ಕನಿಷ್ಠ ದೇವಾಲಯಗಳಲ್ಲಿ ನಮ್ಮ ಸಾಂಸ್ಕೃತಿಕ ನೆಲೆಗಟ್ಟು ಗಟ್ಟಿಯಾಗಬೇಕಾದ ಕೆಲಸ ಆಗದಿದ್ದಲ್ಲಿ ಮತ್ತೆ ಎಲ್ಲಿ ಆಗಬೇಕು ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರ ರಾಜ್ಯ ಪೊಲೀಸರಿಗೆ ಅವಾರ್ಡ್ ನೀಡುತ್ತಿದೆ‌. ಈವರೆಗೆ 24 ಮಂದಿಗೆ ಈ ಅವಾರ್ಡ್ ಘೋಷಣೆ ಆಗಿದೆ. ಆದರೆ ಈವರೆಗೆ ಯಾರಿಗೂ ನೀಡಿಲ್ಲ ಎಂಬ ಪ್ರಶ್ನೆಗೆ, ಕೇಂದ್ರ ಸರಕಾರ ಇದುವರೆಗೆ ಹಸ್ತಾಂತರ ಆಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಆಗುತ್ತದೆ. ನಾನು ಹಾಗೂ ಸಿಎಂ ಬೊಮ್ಮಾಯಿಯವರು ರಾಜ್ಯಪಾಲರ ನೇತೃತ್ವದಲ್ಲಿ ನೀಡುತ್ತಿದ್ದೇವೆ ಎಂದರು.

ಕಲ್ಲಡ್ಕ ಶ್ರೀರಾಮ ವಿದ್ಯಾಲಯ ರಾಜ್ಯದಲ್ಲಿಯೇ ವಿಶಿಷ್ಟ ಶಾಲೆ. ಇಂದು ಆ ಶಾಲೆಯ ವಾರ್ಷಿಕೋತ್ಸವದ ವಿಶೇಷವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಬಂದಿದ್ದೇನೆ.

Ads on article

Advertise in articles 1

advertising articles 2

Advertise under the article