Mangalore: ವಾರಸುದಾರರಿಲ್ಲದ ಕಂತೆ ಕಂತೆ ಹಣ ಪತ್ತೆ ಪ್ರಕರಣ:ಪೊಲೀಸ್ ಸುಪರ್ದಿಯಲ್ಲಿದೆ 3.50 ಲಕ್ಷ ನಗದು

Mangalore: ವಾರಸುದಾರರಿಲ್ಲದ ಕಂತೆ ಕಂತೆ ಹಣ ಪತ್ತೆ ಪ್ರಕರಣ:ಪೊಲೀಸ್ ಸುಪರ್ದಿಯಲ್ಲಿದೆ 3.50 ಲಕ್ಷ ನಗದು

ಮಂಗಳೂರು: ನಗರದ ಪಂಪ್ ವೆಲ್ ಬಳಿ ರಸ್ತೆ ಬದಿಯಲ್ಲಿ ಶಿವರಾಜ್ ಎಂಬವರಿಗೆ ದೊರಕಿರುವ ಹಣದಲ್ಲಿ ಕೂಲಿ ಕಾರ್ಮಿಕ ತುಕಾರಾಂರವರಿಗೆ ನೀಡಿರುವ 2.99 ಲಕ್ಷ ರೂ. ಹಣವನ್ನು ಅವರ ಕುಟುಂಬ ಪೊಲೀಸರಿಗೊಪ್ಪಿಸಿದೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ  ನೀಡಿ "ವಾಹನ ಕ್ಲೀನಿಂಗ್, ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಎಂಬವರಿಗೆ ರಸ್ತೆ ಬದಿಯಲ್ಲಿ ಕಂತೆ ಕಂತೆ ನೋಟ್ ಗಳಿದ್ದ ಹಣದ ಚೀಲವೊಂದು ಸಿಕ್ಕಿತ್ತು. ದೊರೆತ ಹಣದಲ್ಲಿ ಶಿವರಾಜ್ ತನ್ನೊಂದಿಗೆ ಇದ್ದ ತುಕರಾಮ್ ಎಂಬುವವರಿಗೆ 50 ಸಾವಿರ ರೂ. ಹಣದ ಆರು ಬಂಡಲ್ ಗಳನ್ನು ನೀಡಿದ್ದಾನೆ. ಆ ಮೂರು ಲಕ್ಷ ಸೇರಿ ಒಟ್ಟು 3.50 ಲಕ್ಷ ರೂ. ನಗದು ಪೊಲೀಸ್ ಸುಪರ್ದಿಯಲ್ಲಿದೆ" ಎಂದರು.

ಹೀಗೆ‌ ತುಕರಾಮ್ ಗೆ ಮೂರು ಲಕ್ಷ ರೂಪಾಯಿ ನೀಡಲಾಗಿತ್ತು. ಈ ಹಣದಲ್ಲಿ ತುಕರಾಮ್‌ ಅವರು ಐನೂರು ರೂ.ಮಾತ್ರ ಉಪಯೋಗಿಸಿದ್ದಾರೆ. ಹಣ ಸಿಕ್ಕಿರುವ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾದ ಬಳಿಕ ತುಕರಾಮ್ ಮತ್ತು ಅವರ ಮನೆಯವರು 2,99,500 ರೂಪಾಯಿ ಮರಳಿ ನೀಡಿದ್ದಾರೆ ಎಂದು ಹೇಳಿದರು.


ಪೊಲೀಸರು ಆ ದಿನ ಶಿವರಾಜ್ ನನ್ನು ಪರಿಶೀಲನೆ ನಡೆಸಿರುವ ವೇಳೆ 49,500 ರೂ. ಹಣ ದೊರಕಿದೆ. ಸದ್ಯ ಒಟ್ಟು 3.5 ಲಕ್ಷ ರೂ. ಹಣ ಪೊಲೀಸ್ ಸುಪರ್ದಿಯಲ್ಲಿದೆ. ಘಟನಾ ಸ್ಥಳದ ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡುತ್ತಿದ್ದೇವೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಬಂದು ತಮ್ಮದೇ ಹಣವೆಂದು ಸಾಬೀತು ಪಡಿಸಿ ಹಣ ಪಡೆದು ಹೋಗಬಹುದು. ಅದೇ ರೀತಿ‌ ಶಿವರಾಜ್ ನಿಂದ ಎತ್ತಿಕೊಂಡು ಹೋದವರು ಹಣವನ್ನು ಮರಳಿ ಠಾಣೆಗೆ ನೀಡಬೇಕು. ಶಿವರಾಜ್ ಮತ್ತು ತುಕರಾಮ್ ಮೇಲೆ ಪ್ರಕರಣ ದಾಖಲಾಗುವುದಿಲ್ಲ. ಯಾರಾದರೂ ಹಣ ಕೊಂಡೊಯ್ದು ಕೊಡದಿದ್ದರೂ ಪ್ರಕರಣ ದಾಖಲು ಮಾಡುತ್ತೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಎಚ್ಚರಿಕೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article