ಸುರತ್ಕಲ್: ದುಷ್ಕರ್ಮಿಗಳಿಂದ ಹತ್ಯೆಯಾದ ಜಲೀಲ್ ಮೃತದೇಹ ಮನೆಗೆ ರವಾನೆ
Saturday, December 24, 2022
ಮಂಗಳೂರು: ಸುರತ್ಕಲ್ ನಲ್ಲಿ ನಿನ್ನೆ ರಾತ್ರಿ ಹತ್ಯೆಯಾದ ಜಲೀಲ್ ಮೃತದೇಹ ಎ.ಜೆ.ಆಸ್ಪತ್ರೆಯ ಶವಾಗಾರದಿಂದ ಕೃಷ್ಣಾಪುರದ ಅವರ ಮನೆಗೆ ರವಾನೆಯಾಯಿತು.
ಆಂಬ್ಯುಲೆನ್ಸ್ ನಲ್ಲಿ ಅವರ ಮೃತದೇಹ ಮನೆಗೆ ರವಾನೆಯಾಗುವ ವೇಳೆ ಕುಟುಂಬ ಸದಸ್ಯರು ಜೊತೆಗಿದ್ದರು. ಕಾಟಿಪಳ್ಳ 9ನೇ ಬ್ಲಾಕ್ ನಲ್ಲಿರುವ ಅವರ ಮನೆಯಲ್ಲಿ ಕುಟುಂಬ ಸದಸ್ಯರಿಗೆ, ಸಾರ್ವಜನಿಕರಿಗೆ ಅವರ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆ ಬಳಿಕ ಪಂಜಿಮೊಗರಿನಲ್ಲಿರುವ ಮಸೀದಿಯಲ್ಲಿ ದಫನ ಕಾರ್ಯ ಮಾಡಲಾಗುತ್ತದೆ.
ನಿನ್ನೆ ರಾತ್ರಿ ಕೃಷ್ಣಾಪುರ ನಾಲ್ಕನೇ ಬ್ಲಾಕ್ ನ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳಿಬ್ಬರು ಮಾಲಕರಾದ ಜಲೀಲ್ ರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮುಂದಿನ ವ್ಯವಸ್ಥೆಗಾಗಿ ಅವರ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಇದೀಗ ಅವರ ಮೃತದೇಹ ಶವಾಗಾರದಿಂದ ಮನೆಗೆ ರವಾನೆಯಾಗಿದೆ.