ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ನಿಂದ ಬಾಂಬ್ ಪತ್ತೆ ಮಾಡುವ ಮೆಷಿನ್ ಅಳವಡಿಕೆ
Saturday, December 10, 2022
ಮಂಗಳೂರು: ಬಜ್ಪೆಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ಒದಗಿಸುವ ನಿಟ್ಟಿನಲ್ಲಿ ವಿಶೇಷ ಬಾಂಬ್ ಪತ್ತೆ ಮತ್ತು ವಿಲೇವಾರಿ ಸಾಧನವನ್ನು ಸಿಐಎಸ್‌ಎಫ್‌ನ ಏರ್‌ಪೋರ್ಟ್ ಸೆಕ್ಯುರಿಟಿ ಗ್ರೂಪ್‌ಗೆ (ಎಎಸ್‌ಜಿ) ಹಸ್ತಾಂತರಿಸಲಾಯಿತು.
ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಹೊಂದಿರುವ ಯಾರದರೂ ಪ್ರವೇಶಿಸಿದಲ್ಲಿ ಭದ್ರತೆ ನಿರ್ವಹಿಸುವ ಕಾರ್ಯವನ್ನು ನಿರ್ವಹಿಸುವ ಎಎಸ್ ಜಿ ಸಿಬ್ಬಂದಿಗೆ ಈ ಅತ್ಯಾಧುನಿಕ ಉಪಕರಣಗಳು ಸಹಾಯ ಮಾಡಲಿದೆ. ಡಿಸೆಂಬರ್ ಏಳರಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಪ್ರಾದೇಶಿಕ ನಿರ್ದೇಶಕ ರಾಜೀವ್ ಕುಮಾರ್ ರೈ ಅವರು ಉಪಕರಣಗಳನ್ನು ಲೋಕಾರ್ಪಣೆ ಮಾಡಿದರು.
ಈ ಹಿಂದೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಎಸ್ ಜಿ ಸಿಬ್ಬಂದಿಯ ಬಳಕೆಗಾಗಿ ಬುಲೆಟ್ ಪ್ರೂಫ್ ವಾಹನವನ್ನು ಸಮರ್ಪಣೆ ಮಾಡಲಾಗಿತ್ತು. ಅದರಂತೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಎಸ್ ಜಿ ಸಿಬ್ಬಂದಿಯಿಂದ ನಿರ್ವಹಿಸಲ್ಪಡುವ ಅತ್ಯಾಧುನಿಕ ಭದ್ರತಾ ಕಾರ್ಯಾಚರಣೆಗಳ ನಿಯಂತ್ರಣ ಕೇಂದ್ರವನ್ನು ಸಹ ಸ್ಥಾಪಿಸಿದೆ. ಅದು ವಿಮಾನ ನಿಲ್ದಾಣದ ಸಂಪೂರ್ಣ ಏರಿಯಾದ ಮೇಲೆ ಹದ್ದಿನ ಕಣ್ಣು ಇರಿಸುತ್ತದೆ.