ಮಂಗಳೂರು :ನಗರದಾದ್ಯಂತ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ನಿಯಮ ಜಾರಿ
Saturday, December 31, 2022
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ನಿಯಮಾವಳಿ ರೂಪಿಸಲಾಗಿದೆ. ರಾತ್ರಿ 10 ಗಂಟೆಗೆ ಧ್ವನಿ ವರ್ಧಕ ಬಂದ್ ಮಾಡಬೇಕು. ರಾತ್ರಿ 12.30ಕ್ಕೆ ಕಾರ್ಯಕ್ರಮ ಮುಗಿಸಬೇಕು.ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 32 ಕಡೆ ಚೆಕ್ ಪೋಸ್ಟ್ ಹಾಕಲಾಗಿದೆ. ಯಾವುದೇ ತೊಂದರೆ ಇಲ್ಲದೇ ಸಂಭ್ರಮಾಚರಣೆಗಳನ್ನು ಮಾಡಬೇಕು. ಬೀಚ್ ಅಥವಾ ಇನ್ನಿತರ ಜಾಗದಲ್ಲಿ ಸಂಭ್ರಮಾಚರಣೆಗೆ ಅನುಮತಿ ಕಡ್ಡಾಯ. ಅನುಮತಿ ಇಲ್ಲದೇ ಯಾವುದೇ ಆಚರಣೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.
12.30ಗೆ ಎಲ್ಲವೂ ಮುಗಿಸುವಾಗ ಯಾರೂ ರಸ್ತೆಯಲ್ಲಿ ಇರಬಾರದು. ತ್ರಿಬಲ್ ರೈಡ್ ಮತ್ತು ಡ್ರಿಂಕ್ ಎಂಡ್ ಡ್ರೈವ್ ಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ಸಂಘಟನೆಗಳಿಗೆ ಎಚ್ಚರಿಕೆ ಕೊಡೋ ಅಧಿಕಾರ ಇಲ್ಲ. ಯಾರಾದರೂ ತೊಂದರೆ ಕೊಟ್ಟರೆ, ಸಂಶಯಾಸ್ಪದ ವ್ಯಕ್ತಿಗಳು , ಅಪರಿಚಿತರು, ಸಮಾಜಘಾತುಕ ಶಕ್ತಿಗಳು ಕಂಡು ಬಂದಲ್ಲಿ ತತ್ ಕ್ಷಣ 112 ಕ್ಕೆ ಸಂಪರ್ಕ ಮಾಡಿ. ಸುರತ್ಕಲ್ , ಕಾಟಿಪಳ್ಳ ಭಾಗದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.