ಮಂಗಳೂರು: ಸುರತ್ಕಲ್ ಎನ್.ಐ.ಟಿ.ಕೆ. ಲೈಟ್ ಹೌಸ್ ಬೀಚ್‌ನಲ್ಲಿ ವಿದ್ಯಾರ್ಥಿ ನಾಪತ್ತೆ
Saturday, December 31, 2022
ಮಂಗಳೂರು: ನಗರದ ಸುರತ್ಕಲ್ ಬಳಿಯ ಎನ್.ಐ.ಟಿ.ಕೆ. ಲೈಟ್ ಹೌಸ್ ಬೀಚ್ ನಲ್ಲಿ ಈಜಲು ಸಮುದ್ರಕ್ಕಿಳಿದ ಯುವಕ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಡಿ.31ರಂದು ಮಧ್ಯಾಹ್ನ ನಡೆದಿದೆ.
ನಗರದ ಕೆಪಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸತ್ಯಂ (18 ) ಸಮುದ್ರದಲ್ಲಿ ನಾಪತ್ತೆಯಾದ ವಿದ್ಯಾರ್ಥಿ.
ಸತ್ಯಂ ತನ್ನ ಸ್ನೇಹಿತ ಪ್ರಭಾಕರ್ ಎಂಬಾತನೊಂದಿಗೆ ಮಧ್ಯಾಹ್ನ 3.30ರ ಸುಮಾರಿಗೆ ಸುರತ್ಕಲ್ ನ ಎನ್.ಐ.ಟಿ.ಕೆ. ಲೈಟ್ ಹೌಸ್ ಬೀಚ್ ಗೆ ಬಂದಿದ್ದರು. ಸಮುದ್ರಕ್ಕಿಳಿದು ಈಜಾಡುತ್ತಾ ಸ್ನೇಹಿತರಿಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಆದರೆ ಪ್ರಭಾಕರ್ ಈಜಿ ದಡ ಸೇರಿದ್ದರೆ, ಸತ್ಯಂ ಸಮುದ್ರದಲ್ಲಿ ಕಣ್ಮರೆಯಾಗಿದ್ದಾನೆ. ಈತನ ಪತ್ತೆಗೆ ಸ್ಥಳೀಯ ಮೀನುಗಾರರು ಶೋಧ ಕಾರ್ಯ ನಡೆಸಿದ್ದು ಇನ್ನು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.